ತೈವಾನ್ ಟ್ರಯಥ್ಲಾನ್-2025: ಮಹತ್ವದ ಮೈಲಿಗಲ್ಲು ತಲುಪಿದ ಸಿದ್ಧಾರ್ಥ್ ಮಾಂಡಲಿಕ್
Update: 2025-04-30 13:26 IST

ಬೆಂಗಳೂರು, ಎ.29: ಎಪ್ರಿಲ್ 13ರಂದು ತೈವಾನ್‌ನ ಪೆಂಗು ದ್ವೀಪದಲ್ಲಿ ನಡೆದಿದ್ದ ಪ್ರತಿಷ್ಠಿತ ಐರನ್‌ಮ್ಯಾನ್ ತೈವಾನ್ ಟ್ರಯಥ್ಲಾನ್-2025ರಲ್ಲಿ ಸಿದ್ಧ್ದಾರ್ಥ್ ಮಾಂಡಲಿಕ್ ಅವರು 12 ಗಂಟೆ, 52 ನಿಮಿಷ ಹಾಗೂ 57 ಸೆಕೆಂಡ್‌ಗಳಲ್ಲಿ ಅದ್ಭುತ ಸಮಯದೊಂದಿಗೆ ಗುರಿ ತಲುಪಿ ಮಹತ್ವದ ಮೈಲಿಗಲ್ಲು ತಲುಪಿದರು.
ಐರನ್‌ಮ್ಯಾನ್ ಟ್ರಯಥ್ಲಾನ್ 3.8 ಕಿ.ಮೀ. ಓಪನ್ ವಾಟರ್ ಸ್ವಿಮ್ 180 ಕಿ.ಮೀ. ಬೈಕ್ ಸವಾರಿ ಹಾಗೂ 42.2 ಕಿ.ಮೀ. ಪೂರ್ಣ ಮ್ಯಾರಥಾನ್ ಒಳಗೊಂಡಿದ್ದು, ಇವೆಲ್ಲವೂ ಅನುಕ್ರಮವಾಗಿ ಪೂರ್ಣಗೊಂಡಿವೆ.
2024ರಲ್ಲಿ ಗೋವಾದಲ್ಲಿ ತನ್ನ ಟ್ರಯಥ್ಲಾನ್ ಪಯಣ ಆರಂಭಿಸಿದ್ದ ಸಿದ್ಧಾರ್ಥ್ ಅವರ ಈ ಸಾಧನೆಯು ಮಹತ್ವದ ಮೈಲಿಗಲ್ಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದ ಸಿದ್ಧ್ದಾರ್ಥ್ ಅವರು 2006ರ ಸೆಪ್ಟಂಬರ್‌ನಲ್ಲಿ 3 ಮೆಕ್ ಇನ್ಫಾಂಟ್ರಿಗೆ ನಿಯೋಜನೆಗೊಂಡಿದ್ದು, ಭಾರತೀಯ ಸೇನೆಯಲ್ಲಿ 18 ವರ್ಷಗಳನ್ನು ಪೂರೈಸಿದ್ದಾರೆ.



