ಯಶಸ್ವಿ ಫಿಶ್ ಮೀಲ್, ಆಯಿಲ್ ಕಂಪೆನಿಯೊಂದಿಗೆ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಒಪ್ಪಂದ
ಬೆಂಗಳೂರು: ಮೀನುಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಅನುಕೂಲವಾಗಲು ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಮತ್ತು ಉಡುಪಿಯ ಯಶಸ್ವಿ ಫಿಶ್ ಮೀಲ್ ಮತ್ತು ಆಯಿಲ್ ಕಂಪೆನಿ ನಡುವೆ ಒಡಂಬಡಿಕೆ ಪತ್ರಕ್ಕೆ ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸಹಿ ಮಾಡಲಾಯಿತು.
ಈ ಒಡಂಬಡಿಕೆಯಿಂದಾಗಿ ಯಶಸ್ವಿ ಕಂಪೆನಿಯು ವಿವಿಯ ಮೀನುಗಾರಿಕಾ ತಜ್ಞರಿಂದ ತಾಂತ್ರಿಕ ಸಲಹೆ ಪಡೆಯಲಿದೆ. ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಿದೆ. ಇಂಗ್ಲೆಂಡಿನ ಮರೈನ್ ಇನ್ ಗ್ರೀಡಿಯೆಂಟ್ಸ್ ಲಿಮಿಟೆಡ್ ಟ್ರಸ್ಟ್ ನಿಂದ ಕಾನೂನು ಬದ್ದವಾಗಿ ಮರೈನ್ ಟ್ರಸ್ಟ್ ಸರ್ಟಿಫಿಕೇಟ್ ಪಡೆಯಲಿದೆ.
ಮಂಗಳೂರಿನಲ್ಲಿ 1969ರಲ್ಲಿ ಸ್ಥಾಪಿತವಾದ ದೇಶದ ಮೊಟ್ಟ ಮೊದಲ ಮೀನುಗಾರಿಕಾ ಕಾಲೇಜಿನ ಬೆಳವಣಿಗೆಯಲ್ಲಿ ಇಂತಹ ‘ಕೈಗಾರಿಕಾ-ಶೈಕ್ಷಣಿಕ ಒಪ್ಪಂದ'ವು ಒಂದು ದಿಟ್ಟ ಹೆಜ್ಜೆಯಾಗಲಿದೆ ಎಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ರೇಶ್ಮೆ ಸಚಿವ ಕೆ.ವೆಂಕಟೇಶ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ, ಪಶು ವಿವಿಯ ಕುಲಪತಿಗ ಪ್ರೊ.ಕೆ.ಸಿ.ವೀರಣ್ಣ, ಕುಲಸಚಿವ ಎಸ್. ಶಿವಶಂಕರ್ ಸೇರಿದಂತೆ ವಿವಿಯ ಸಿಬ್ಬಂದಿ ಭಾಗವಹಿಸಿದ್ದರು.