ಬೆಂಗಳೂರಿನಲ್ಲಿ ನೀರಿನ ದರ ಏರಿಕೆ | ಮೇ ತಿಂಗಳ ಬಿಲ್‍ನಲ್ಲಿ ದರ ಏರಿಕೆ ಅನ್ವಯ

Update: 2025-04-10 00:07 IST
ಬೆಂಗಳೂರಿನಲ್ಲಿ ನೀರಿನ ದರ ಏರಿಕೆ | ಮೇ ತಿಂಗಳ ಬಿಲ್‍ನಲ್ಲಿ ದರ ಏರಿಕೆ ಅನ್ವಯ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು : ಹನ್ನೊಂದು ವರ್ಷಗಳ ನಂತರ ಬೆಂಗಳೂರು ಜಲಮಂಡಳಿಯು ನೀರಿನ ದರವನ್ನು ಏರಿಕೆ ಮಾಡಲು ಉದ್ದೇಶಿಸಲಾಗಿದ್ದು, ಪ್ರತಿ ಲೀಟರ್ ನೀರಿಗೆ 1 ಪೈಸೆಯಿಂದ 1.90 ಪೈಸೆಯ ವರೆಗೆ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಎ.10ರಂದು ಅಧಿಕೃತವಾಗಿ ಆದೇಶ ಹೊರಬೀಳಲಿದ್ದು, ಮೇ ತಿಂಗಳ ಬಿಲ್‍ನಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಬಳಕೆಗೆ ಸಂಬಂಧಿಸಿ ಪ್ರತಿ ಲೀಟರ್ ನೀರಿಗೆ ಕನಿಷ್ಠ 0.15 ಪೈಸೆಯಿಂದ ಗರಿಷ್ಠ 1 ಪೈಸೆಯ ವರೆಗೆ ಹೆಚ್ಚಳ ಮಾಡಲಾಗಿದೆ. ಹೈ ರೈಸ್ ಗೃಹ ಬಳಕೆದಾರರಿಗೆ ಪ್ರತಿ ಲೀಟರ್‍ಗೆ ಕನಿಷ್ಠ 0.30 ಪೈಸೆಯಿಂದ ಗರಿಷ್ಠ 1 ಪೈಸೆ ಹೆಚ್ಚಳ ಮಾಡಲಾಗಿದೆ. ನಾನ್ ಡೊಮೆಸ್ಟಿಕ್ ಬಳಕೆದಾರರಿಗೆ ಪ್ರತಿ ಲೀಟರ್‍ಗೆ 0.90 ಪೈಸೆಯಿಂದ ಗರಿಷ್ಠ 1.90 ಪೈಸೆಯವರೆಗೆ ಹೆಚ್ಚಳ ಮಾಡಲಾಗಿದೆ ಎಂದರು.

11 ವರ್ಷಗಳಲ್ಲಿ ನಗರ ಕೇವಲ ವ್ಯಾಪ್ತಿಯಷ್ಟೆ ಅಲ್ಲದೆ, ಜನಸಂಖ್ಯೆಯಲ್ಲೂ ಅಗಾಧ ಬೆಳವಣಿಗೆಯನ್ನು ಕಂಡಿದೆ. ಸರಕಾರದಿಂದ ಹಣಕಾಸಿನ ಸಹಾಯವಿಲ್ಲದ ಸ್ವಾಯತ್ತ ಸಂಸ್ಥೆಯಾಗಿರುವ ಮಂಡಳಿಗೆ ನೀರಿನ ಶುಲ್ಕವೇ ಪ್ರಮುಖ ಆದಾಯವಾಗಿದೆ. 10 ವರ್ಷಗಳಲ್ಲಿ ವಿದ್ಯುತ್ ವೆಚ್ಚವು ಶೇ.107 ರಷ್ಟು ಹೆಚ್ಚಾಗಿದೆ. ಹಾಗೆಯೇ ನಿರ್ವಹಣಾ ವೆಚ್ಚದಲ್ಲಿ ಶೇ.122.5 ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಬೆಂಗಳೂರು ಜಲಮಂಡಳಿಯ ಮಾಸಿಕ ವೆಚ್ಚ 200 ಕೋಟಿ ರೂಪಾಯಿಗಳಾಗಿದೆ. ಆದರೆ, ಪ್ರತಿ ತಿಂಗಳು ಸಂಗ್ರಹಣೆ ಆಗುತ್ತಿರುವುದು ಕೇವಲ 120 ಕೋಟಿ ರೂಪಾಯಿಗಳು ಮಾತ್ರ. ಪ್ರತಿ ತಿಂಗಳು ಸುಮಾರು 80 ಕೋಟಿ ರೂಪಾಯಿಗಳ ಆರ್ಥಿಕ ಕೊರತೆಯನ್ನು ಬೆಂಗಳೂರು ಜಲಮಂಡಳಿ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ನೀರಿನ ದರ ಹೆಚ್ಚಳದ ಪ್ರಮಾಣ: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ತನ್ನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದಂತೆ ನಿಭಾಯಿಸಲು ನೀರಿನ ದರವನ್ನು ಏರಿಕೆ ಮಾಡಲಾಗಿದೆ. ಕಡಿಮೆ ನೀರು ಬಳಕೆಯನ್ನು ಉತ್ತೇಜಿಸುವುದು ಹಾಗೆಯೇ ನೀರಿನ ಮರುಬಳಕೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಯಾರಿಗೂ ಹೊರೆಯಾಗದಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪರಿಷ್ಕೃತ ನೀರಿನ ದರದ ವಿವರ:

ಗೃಹ ಬಳಕೆಗೆ:

0 - 8000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‌ಗೆ 0.15 ಪೈಸೆ ಹೆಚ್ಚಳ ಮಾಡಲಾಗುವುದು. ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್‌ ಗೆ ಪ್ರಸ್ತುತ ದರ 7 ರೂ.ಗಳಿಂದ 8.50 ರೂ.ಗಳಷ್ಟು ಹೆಚ್ಚಳವಾಗಲಿದೆ.

8001 - 25000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್‌ಗೆ 0.30 ಪೈಸೆ ಹೆಚ್ಚಳವಾಗಲಿದ್ದು, ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್‍ಗೆ ಪ್ರಸ್ತುತ ದರ 11 ರೂ.ಗಳಿಂದ 14 ರೂ.ಗಳವರೆಗೆ ಹೆಚ್ಚಳವಾಗಲಿದೆ.

25001 - 50000 ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‍ಗೆ 0.80 ಪೈಸೆ ಹೆಚ್ಚಳವಾಗಲಿದೆ. 50001ಗಿಂತ ಹೆಚ್ಚು ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳವಾಗಲಿದೆ.

ಡೊಮೆಸ್ಟಿಕ್ ಹೈ-ರೈಸ್:

0-2,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‌ ಗೆ 0.30 ಪೈಸೆ ಹೆಚ್ಚಳವಾಗಲಿದೆ. 2,00,001-5,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್ ಗೆ 0.60 ಪೈಸೆ ಹೆಚ್ಚಳವಾಗಲಿದೆ. 5,00,001-10,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‌ ಗೆ 1 ಪೈಸೆ ಹೆಚ್ಚಳವಾಗಲಿದೆ.

ಗೃಹೇತರ ಬಳಕೆ:

ಕೈಗಾರಿಕೆಗಳಿಗೆ/ಬಲ್ಕ್ ಸಪ್ಲೇ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‌ ಗೆ 0.90 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

10,000 ಸಾವಿರ ಲೀಟರ್‌ ವರೆಗಿನ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳ

10,001 - 25,000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‍ಗೆ 1.30 ಪೈಸೆ ಹೆಚ್ಚಳ, 25,001 - 50,000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ನಲ್ಲಿ ಪ್ರತಿ ಲೀಟರ್‌ ಗೆ 1.50 ಪೈಸೆ ಹೆಚ್ಚಳ

50,001 - 75,000 ಸಾವಿರ ಲೀಟರ್ ಬಳಕೆಯ ಸ್ಲಾಬ್‍ಗೆ ಪ್ರತಿ ಲೀಟರ್‍ಗೆ 1.90 ಪೈಸೆ ಹೆಚ್ಚಳ, 760001 - 1 ಲಕ್ಷ ಸಾವಿರ ಲೀಟರ್ ಬಳಕೆಯ ಸ್ಲಾಬ್‍ಗೆ ಪ್ರತಿ ಲೀಟರ್‌ ಗೆ 1.10 ಪೈಸೆ ಹೆಚ್ಚಳ

1 ಲಕ್ಷ ಮತ್ತು ಅದಕ್ಕೂ ಹೆಚ್ಚಿನ ಲೀಟರ್ ನೀರು ಬಳಕೆ ಸ್ಲಾಬ್‍ಗೆ ಪ್ರತಿ ಲೀಟರ್‌ ಗೆ 1.20 ಪೈಸೆ ಹೆಚ್ಚಳ

ಪ್ರತಿವರ್ಷ ಎಪ್ರಿಲ್ ನೀರಿನ ದರ ಶೇ.3ರಷ್ಟು ಹೆಚ್ಚಳ: ‘ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಪ್ರತಿ ವರ್ಷ ಎಪ್ರಿಲ್ ತಿಂಗಳ ಒಂದರಂದು ನೀರಿನ ದರವನ್ನು ಶೇಕಡಾ 3 ರಷ್ಟು ಹೆಚ್ಚು ಮಾಡಲು ಜಲಮಂಡಳಿಯಲ್ಲಿ ತೀರ್ಮಾನಿಸಲಾಗಿದೆ’

-ಡಾ. ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News