ಬೆಳಗಾವಿ | ಗೋಮಾಳ ಜಾಗದ ಗಲಾಟೆ: ದಲಿತರಿಗೆ ಸೇರಿದ ಗುಡಿಸಲುಗಳಿಗೆ ಬೆಂಕಿ

Update: 2024-10-29 07:35 GMT

ಬೆಳಗಾವಿ: ದಲಿತ ಕುಟುಂಬಗಳಿಗೆ ಸೇರಿದ ಜಾನುವಾರು ಗುಡಿಸಲುಗಳಿಗೆ ದುಷ್ಕರ್ಮಿಗಳು ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆದಿದೆ. ಸರಕಾರಿ ಗೋಮಾಳ ಜಾಗಕ್ಕಾಗಿ ದಲಿತ ಮತ್ತು ಹಾಗೂ ಸವರ್ಣಿಯ ಕುಟುಂಬವೊಂದರ ನಡುವೆ ಗಲಾಟೆ ನಡೆಯುತ್ತಿತ್ತೆನ್ನಲಾಗಿದೆ. ಇದೇ ದ್ವೇಷದಲ್ಲಿ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ.

ಬೆಂಕಿಯ ಕೆನ್ನಾಲಗೆಗೆ ಗುಡಿಸಲುಗಳು ಸುಟ್ಟು ಕರಕಲಾಗಿವೆ.

ಮುಗಳಖೋಡ ಗ್ರಾಮದಲ್ಲಿನ ಗೋಮಾಳ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಜಗಳವಿತ್ತು. ಈ ವಿವಾದಿತ ಗೋಮಾಳಕ್ಕೆ ಸೇರಿದ ಸುಮಾರು 12 ಗುಂಟೆ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿದ್ದರು. ಈ ಗುಡಿಸಲುಗಳಿಗೆ ರಾತ್ರಿ ವೇಳೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಗುಡಿಸಲುಗಳು ಸುಟ್ಟು ಕರಕಲಾಗಿವೆ. ಸವರ್ಣಿಯರೇ ತಮ್ಮ ಗುಡಿಸಲುಗಳಿಗೆ ಬೆಂಕಿ ಹಚ್ಚಿರುವುದಾಗಿ ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News