ಬೆಳಗಾವಿ | ನಾಲ್ವರು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
Update: 2025-01-28 11:20 IST

ಬೆಳಗಾವಿ: ಇಂದು ಮುಂಜಾನೆ ನಗರದ ನಾಲ್ವರು ಉದ್ಯಮಿಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ.
ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರೆ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್, ಗಣೇಶಪುರದಲ್ಲಿರುವ ಅಶೋಕ ಐರನ್ ಕಂಪನಿಯ ಮಾಲಕ ಅಶೋಕ್ ಹುಂಬರವಾಡಿ ಮನೆಗಳ ಮೇಲೂ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ತಪಾಸಣೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಮತ್ತು ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಎರಡು ಸಕ್ಕರೆ ಕಾರ್ಖಾನೆ, ಐರನ್ ಹಾಗೂ ಗ್ರೈನೆಟ್ ಉದ್ಯಮ ನಡೆಸುತ್ತಿರುವ ದೊಡ್ಡಣ್ಣವರ ಕುಟುಂಬ ಬೆಳಗಾವಿಯ ಖ್ಯಾತ ಉದ್ಯಮಿ ಕುಟುಂಬವಾಗಿದೆ. ಐರನ್ ಹಾಗೂ ಗ್ರೈನೆಟ್ ದೇಶ- ವಿದೇಶಗಳಿಗೆ ರಫ್ತಾಗುತ್ತವೆ.