ಕಿತ್ತೂರು | ಡಾಬಾದಲ್ಲಿ ಜೀತದಾಳಿನಂತೆ ದುಡಿಯುತ್ತಿದ್ದ ಯುವಕನ ರಕ್ಷಣೆ: FIR ದಾಖಲು

Update: 2024-11-30 07:40 GMT

ಸಾಂದರ್ಭಿಕ ಚಿತ್ರ (credit: Meta A!)

ಬೆಳಗಾವಿ: ಡಾಬಾದಲ್ಲಿ ಯುವಕನೋರ್ವನನ್ನು ಜೀತದಾಳಿನಂತೆ ಕಾಲುಗಳಿಗೆ ಸರಪಳಿ ಬಿಗಿದು ಕೆಲಸ ಮಾಡಿಸುತ್ತಿದ್ದ ಅಮಾನವೀಯ ಘಟನೆ ಕಿತ್ತೂರು ಸಮೀಪ ಪತ್ತೆಯಾಗಿರುವುದು ವರದಿಯಾಗಿದೆ.

ಕಿತ್ತೂರು ಸಮೀಪದ ಹಳೆ ಢಾಬಾವೊಂದರಲ್ಲಿ ಈ ಕೃತ್ಯ ಬೆಳಕಿಗೆ ಬಂದಿದ್ದು, 26 ವರ್ಷದ ಉತ್ತರ ಪ್ರದೇಶ ಮೂಲದ ಯುವಕನೊಬ್ಬನನ್ನು ಪೊಲೀಸರು ರಕ್ಷಿಸಿದ್ದು, ಡಾಬಾ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಢಾಬಾದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಯುವಕನ ಕಾಲಿಗೆ ಸರಪಳಿ ಕಟ್ಟಲಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಕಾರ್ಮಿಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಡಾಬಾ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News