ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪ : ಶಾಸಕ ಪ್ರಭು ಚೌವ್ಹಾಣ್ ವಿರುದ್ಧ ಮುಖ್ಯಮಂತ್ರಿಗೆ ದೂರು

ಬೀದರ್ : ಶಾಸಕ ಪ್ರಭು ಚೌವ್ಹಾಣ್ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಶಾಸಕರಾಗಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರು ನೀಡಿದೆ.
ಬುಧವಾರ ನಗರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದಾಗ ದೂರು ನೀಡಿದ್ದಾರೆ.
ಔರಾದ್ ಎಸ್ಸಿ ಮೀಸಲು ಕ್ಷೇತ್ರದಿಂದ ಪ್ರಭು ಚೌವ್ಹಾಣ್ ಅವರು ನಾಲ್ಕು ಬಾರಿ ಗೆದ್ದು ಶಾಸಕರಾಗಿ ಸಚಿವರಾಗಿದ್ದಾರೆ. ಆದರೆ ಅವರು ಎಸ್ಸಿ ಪಟ್ಟಿಯಲ್ಲಿ ಬರುವುದಿಲ್ಲ. ಚೌವ್ಹಾಣ್ ಅವರು ಮಹಾರಾಷ್ಟ್ರದ ಮೂಲದವರಾಗಿದ್ದು, ಅವರು ಮಹಾರಾಷ್ಟ್ರದ ಆಟಿಣ ಪ್ರವರ್ಗದಲ್ಲಿ ಸೇರುತ್ತಾರೆ. ಆದರೆ ಕರ್ನಾಟಕದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು, ಸರ್ಕಾರಕ್ಕೆ ಮೋಸ ಮಾಡುವ ಮೂಲಕ ಔರಾದ್ ಜನರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸೇನೆ (ರಾಮ್ ವಿಲಾಸ) ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ನಿರಾಟೆ, ರಾಜಕುಮಾರ್ ಗೂನ್ನಳ್ಳಿ, ರಾಘವೇಂದ್ರ ಮೀನಕೇರಾ, ಅಂಬೇಡ್ಕರ್ ಬೌದ್ಧೆ , ಜಗನ್ನಾಥ್ ಹೊನ್ನಾ, ಡಿ.ಪ್ರಭಾಕರ್ ಎಕೆಂಬೆಕರ್, ಭೀಮರಾವ್ ಭಾವಿಕಟ್ಟೆ, ನಿತೀಶ್ ಉಪ್ಪೆ ಹಾಗೂ ಅರವಿಂದ ದಯಾಳ್ ಸೇರಿದಂತೆ ಇತರರು ಇದ್ದರು.