ಬೀದರ್ | ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
Update: 2025-04-18 09:57 IST

ಮೃತ ಯುವಕ
ಬೀದರ್ : ಈಜಲು ಹೋದ ಯುವಕನೊರ್ವ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರದ ಝರನಾ ಮಂದಿರದ ಹತ್ತಿರವಿರುವ ಈಜುಕೊಳದಲ್ಲಿ ನಡೆದಿದೆ.
ನಗರದ ಅಬ್ದುಲ್ ಫೈಜ್ ದರ್ಗಾದ ನಿವಾಸಿ ಸಯ್ಯದ್ ಅಫಾನ್ (19) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಇಬ್ಬರು ಗೆಳೆಯರ ಜೊತೆ ಈಜುಕೊಳದಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.