ಬೀದರ್ | ಎ.24ರಂದು ನಡೆಯುವ ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಬ್ದುಲ್ ಜಲೀಲ್ ಕರೆ

ಬೀದರ್ : ನಗರದಲ್ಲಿ ಎ. 24 ರಂದು ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಹೋರಾಟ ನಡೆಸಲಾಗುತ್ತಿದ್ದು, ಈ ಹೋರಾಟದಲ್ಲಿ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಎಲ್ಲ ಸೆಕ್ಯೂಲರ್ ವಾದಿಗಳು ಭಾಗವಹಿಸಬೇಕು ಎಂದು ಅಬ್ದುಲ್ ಜಲೀಲ್ ಅವರು ಕರೆ ನೀಡಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ್ ಸಾಮಾನ್ಯ ಜನರ ಹಿತಕ್ಕೋಸ್ಕರ ಕೆಲಸ ಮಾಡುತ್ತದೆ. ಜನರ ಒಳ್ಳೆಯದಕ್ಕಾಗಿ ಕೆಲವರು ಜಮೀನು ನೀಡುತ್ತಾರೆ. ಆದರೆ ಸರ್ಕಾರ ಈ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ತಿಳಿಸಿದರು.
ಮಹಮ್ಮದ್ ನಿಜಾಮುದ್ದಿನ್ ಅವರು ಮಾತನಾಡಿ, ವಕ್ಫ್ ತಿದ್ದುಪಡಿ ಕಾಯಿದೆಯೂ ಸಂಪೂರ್ಣವಾಗಿ ಸಂವಿಧಾನ ವಿರೋಧಿ ಕಾಯಿದೆಯಾಗಿದೆ. ಇದು ಬಹಳ ಅಪಾಯಕಾರಿ. ಎಷ್ಟೇ ವಿರೋಧವಿದ್ದರೂ ಕೂಡ ತಾರಾತುರಿಯಲ್ಲಿ ಈ ಕಾನೂನು ಜಾರಿ ಮಾಡಲಾಗಿದೆಮ ಎಂದರು.
ಸೈಯದ್ ಸರ್ಫರಾಜ್ ಹಾಸ್ಮಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಹಮ್ಮದ್ ಅಸಾದುದ್ದಿನ್, ಉಬಸ್ಸಿರ್ ಅಬ್ಬು ಹಾಗೂ ಅಬದ್ ಅಲಿ ಸೇರಿದಂತೆ ಇತರರು ಭಾಗವಹಿಸಿದ್ದರು.