ಬೀದರ್ | ಐಪಿಎಲ್ ಬೆಟ್ಟಿಂಗ್ ಆರೋಪ : ಓರ್ವನ ಬಂಧನ
Update: 2025-04-23 22:12 IST

ಬೀದರ್ : ಐಪಿಎಲ್ ಆಟದ ವೇಳೆ ಕಾನೂನು ಬಾಹಿರವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಒರ್ವನನ್ನು ಮೂಡಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವೆಂಕಟೇಶ್ (28) ಎಂದು ಗುರುತಿಸಲಾಗಿದೆ.
ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೊ ಸೂಪರ್ ಜೈಂಟ್ಸ್ ನಡುವೆ ಐಪಿಎಲ್ ಮ್ಯಾಚ್ ನಡೆದಿತ್ತು. ಈ ಸಮಯದಲ್ಲಿ ವೆಂಕಟೇಶ್ ಎಂಬಾತ ಮೂಡುಬಿಯ ಕೆಇಬಿ ಕಚೇರಿ ಹತ್ತಿರ ಕಾನೂನು ಬಾಹಿರವಾದ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಎನ್ನಲಾಗಿದೆ.
ಆರೋಪಿಯ ಬಳಿಯಿಂದ 530 ರೂ. ನಗದು ಹಣ, 15 ಸಾವಿರ ಬೆಲೆ ಬಾಳುವ ಒಂದು ಮೊಬೈಲ್ ಫೋನ್ ಹಾಗೂ ಸುಮಾರು 90 ಸಾವಿರ ರೂ. ಗಲ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೂಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.