ಬೀದರ್ | ಎಸೆಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Update: 2025-03-19 20:06 IST
ಬೀದರ್ | ಎಸೆಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
  • whatsapp icon

ಬೀದರ್ : ಮಾ.21 ರಿಂದ ಏ.4 ರವರೆಗೆ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಮಾ.21 ರಂದು ಪ್ರಥಮ ಭಾಷೆ, ಮಾ.24 ರಂದು ಗಣಿತ, ಮಾ.26 ರಂದು ದ್ವಿತೀಯ ಭಾಷೆ, ಮಾ.29 ರಂದು ಸಮಾಜ ವಿಜ್ಞಾನ, ಏ.2 ರಂದು ವಿಜ್ಞಾನ ಹಾಗೂ ಏ.4 ರಂದು ತೃತೀಯ ಭಾಷೆಗೆ ಪರೀಕ್ಷೆ ನಡೆಯಲಿವೆ. ಪ್ರಥಮ ಬಾರಿಗೆ ಬರೆಯುವ 25,409, ಖಾಸಗಿ 840, ಪುನರಾವರ್ತಿತ 2,353 ಸೇರಿ ಒಟ್ಟು 28,602 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟು 571 ಶಾಲೆಗಳು ಪರೀಕ್ಷೆಗೆ ನೊಂದಾಯಿಸಿವೆ. ಅದರಲ್ಲಿ 91 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಒಟ್ಟು ಕೊಠಡಿಗಳ ಸಂಖ್ಯೆ 1,264 ಇದೆ. ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾದೆ. ವೆಬ್‌ಕಾಸ್ಟಿಂಗ್‌ಗಾಗಿ ಇಂಟರ್ನೆಟ್ ಸೌಲಭ್ಯ ಹೊಂದಿರುವ ಕೇಂದ್ರಗಳ ಸಂಖ್ಯೆ 91 ಇದ್ದು, ಪ್ರಶ್ನೆ ಪತ್ರಿಕೆಗೆ ವಿತರಣೆಗಾಗಿ ರಚಿಸಲಾದ ಮಾರ್ಗಗಳ ಸಂಖ್ಯೆ 47 ಇವೆ ಎಂದು ಅವರು ಹೇಳಿದ್ದಾರೆ.

ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕ ಮತ್ತು ಪ್ರಶ್ನೆ ಪತ್ರಿಕೆ ಅಭಿರಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ವ್ಯವಸ್ಥಿತವಾಗಿ ನಡೆಯುವುದನ್ನು ಖಚಿತಪಡಿಸಲು ಜಿಲ್ಲಾ ಮಟ್ಟದಲ್ಲಿ ವೆಬ್‌ ಕಾಸ್ಟಿಂಗ್ ಮಾಡಲು ಪ್ರತಿ 5 ಪರೀಕ್ಷಾ ಕೇಂದ್ರಗಳಿಗೆ ಒಂದರಂತೆ ತಂಡ ರಚಿಸಿ ಜಿಲ್ಲಾ ಪಂಚಾಯತಿಯಲ್ಲಿ ವೇಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲು ಕಲಂ 144 ಜಾರಿ ಮಾಡಲಾಗಿದ್ದು, ಪರೀಕ್ಷಾ ಸಿಬ್ಬಂದಿಯನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅನಧೀಕೃತ ವ್ಯಕ್ತಿ ಪ್ರವೇಶಿಸಲು ನಿರ್ಭಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೊಬೈಲ್ ಫೋನ್ ಹಾಗೂ ಇನ್ನಿತರ ಡಿಜಿಟಲ್ ಉಪಕರಣ ಬಳಸವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ತಾಲ್ಲೂಕಿಗೆ ಒಂದರಂತೆ ಸರದಿ ಪದ್ದತಿಯಲ್ಲಿ ಶಿಕ್ಷಣ ಇಲಾಖೆ ಹೊರತು ಪಡಿಸಿ ಅನ್ಯ ಇಲಾಖೆಯ ಅಧಿಕಾರಿ, ಜಾಗೃತ ದಳ ಅಧಿಕಾರಿಗಳಾಗಿ ನೇಮಿಸಿ 5 ತಂಡ ರಚಿಸಲಾಗಿದೆ. ಬೇಸಿಗೆ ಅವಧಿಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಓಆರ್‌ಎಸ್ ನೀಡಲು ಸೂಚಿಸಲಾಗಿದೆ. ಹಾಗೆಯೇ 108 ಸೆವೇಯನ್ನು ಪರೀಕ್ಷಾ ಕೇಂದ್ರಗಳ ಸಮಿಪ ಸಿಗುವ ಹಾಗೆ ಕ್ರಮವಹಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದವರೆಗೆ ಪ್ರವೇಶ ಪತ್ರ ಸಾದರು ಪಡಿಸಿ ಉಚಿತವಾಗಿ ಪ್ರಯಾಣಿಸಲು ಬಸ್ ಸೌಲಭ್ಯ ಪಡೆಯಬಹುದಾಗಿದೆ. ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಲು ಜಿಲ್ಲಾಡಳಿತ ವತಿಯಿಂದ ವಿದ್ಯಾರ್ಥಿಗಳಿಗೆ ಅವರು ಶುಭ ಹಾರೈಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News