ಬೀದರ್ | ಒಳಮೀಸಲಾತಿ ಜಾರಿಗೆ ವಿರೋಧಿಸಿ ಪ್ರತಿಭಟನೆ

ಬೀದರ್ : ಒಳಮೀಸಲಾತಿ ಜಾರಿಗೆ ವಿರೋಧಿಸಿ ಒಳಮೀಸಲಾತಿ ವಿರೋಧ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಳ ಮೀಸಲಾತಿ ವಿರೋಧ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವೈಜೀನಾಥ್ ಸೂರ್ಯವಂಶಿ ಅವರು ಮಾತನಾಡಿ, ಒಲಮೀಸಲಾತಿ ಎನ್ನುವುದು ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಉಪ ಮೀಸಲಾತಿ ಅಡಿಯಲ್ಲಿ ಒಳಮೀಸಲಾತಿ ಮಸೂದೆಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಬಾರದು. ಇದರಿಂದ ಕರ್ನಾಟಕದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. ಆರ್ಟಿಕಲ್ 341 ಉಲ್ಲಂಘಿಸಲಾಗಿದೆ. ಇವರ ಹತ್ತಿರ ಯಾವುದೇ ರೀತಿಯ ಪ್ರಾಯೋಗಿಕ ದತ್ತಾಂಶ ಇಲ್ಲ. ಉಪ ವರ್ಗೀಕರಣವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಲಾಗಿದೆ. ಒಳಮೀಸಲಾತಿ ಎನ್ನುವುದೇ ಸಂವಿಧಾನ ವಿರೋಧಿಯಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಜಾರಿ ಮಾಡಬಾರದು. ರಾಷ್ಟ್ರಪತಿಗಳು ಈ ಮಸೂದೆಯನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಳ ಮೀಸಲಾತಿ ವಿರೋಧ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ, ಶ್ರೀಕಾಂತ್ ಭವಾನಿ, ಅಂಬರೀಶ್ ಕುದರೆ, ಅಮೃತ್ ಮುತ್ತಂಗಿಕರ್, ಅಂಬಾದಾಸ್ ಚಕ್ರವರ್ತಿ, ರವಿ ಮೊರೆ, ರಾಹುಲ್ ಡಾಂಗೆ, ಮಲ್ಲಿಕಾರ್ಜುನ್ ಕೌಠಾ, ಹಾಗೂ ರವಿ ಭೂಸಂಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.