ಬೀದರ್ | ಮೃತ ಮಹಿಳೆಯ ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರಿಂದ ಮನವಿ

ಸಾಂದರ್ಭಿಕ ಚಿತ್ರ
ಬೀದರ್ : ನಗರದ ರೈಲು ನಿಲ್ದಾಣದ ಕಚೇರಿ ಎದುರುಗಡೆ ಎ 22 ರಂದು ಅಂದಾಜು 45 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಕಂಡುಬಂದಿದ್ದು, ಈವರೆಗೆ ಮೃತಳ ವಾರಸುದಾರರು ಯಾರು ಎಂಬುವುದಾಗಿ ಪತ್ತೆಯಾಗಿಲ್ಲ. ಹಾಗಾಗಿ ಯಾರಾದರೂ ವಾರಸುದಾರರು ಇದ್ದರೆ ಸಂಪರ್ಕಿಸಿ ಎಂದು ಜಿಲ್ಲಾ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ಮಹಿಳೆಯು ಅಂದಾಜು 5 ಅಡಿ 4 ಇಂಚು ಎತ್ತರ ಇದ್ದು, ಸದೃಢ ಮೈಕಟ್ಟು, ಕಪ್ಪು ಮೈ ಬಣ್ಣ, ತಲೆಯಲ್ಲಿ ಕಪ್ಪು ಮಿಶ್ರಿತ ಬಿಳಿ ಕೂದಲು, ಸಣ್ಣ ಕಿವಿಗಳು, ನೆಟ್ಟನೆ ಮೂಗು, ಅಗಲವಾದ ಹಣೆ, ದಪ್ಪ ತುಟಿ, ಮೈಮೇಲೆ ಒಂದು ಹಸಿರು ಬಣ್ಣದ ಕುಪ್ಪಸ, ಒಂದು ನೀಲಿ ಬಣ್ಣದ ಸೀರೆ, 2 ಕಾಲುಂಗುರ ಹಾಗೂ ಕೊರಳಲ್ಲಿ ಒಂದು ರೋಡ್ ಗೋಲ್ಡ್ ಚೈನ್ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೈಲ್ವೆ ನಿಲ್ದಾಣದ ಡಿ.ವೈ.ಎಸ್.ಎಸ್. ಅನಂತರಾಮ್ ಮೀನಾ ಅವರ ಲಿಖಿತ ಮಾಹಿತಿ ಮೇರೆಗೆ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ, ಬೀದರ್ ರೈಲ್ವೆ ನಿಲ್ದಾಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಿಗೆ ಮತ್ತು ದೂರವಾಣಿ ಸಂಖ್ಯೆ: 08482-226389, ಮೊಬೈಲ್ ಸಂಖ್ಯೆ: 94808 02133, 74830 95508, 70193 84645ಗೆ ಸಂಪರ್ಕಿಸಲು ಕೋರಿದ್ದಾರೆ.