ಬೀದರ್ | ಹಿಂದಿ ವಿಷಯದಲ್ಲಿ 80ಕ್ಕೆ 80 ಅಂಕ ನೀಡದಿದ್ದರೆ ಆತ್ಮಹತ್ಯೆ ಬೆದರಿಕೆ; ವಿದ್ಯಾರ್ಥಿ ಬರೆದ ಪತ್ರ ವೈರಲ್
Update: 2025-04-23 16:46 IST

ಬೀದರ್ : ಎಸೆಸೆಲ್ಸಿ ಪರೀಕ್ಷೆಯ ಹಿಂದಿ ವಿಷಯದಲ್ಲಿ 80ಕ್ಕೆ 80 ಅಂಕ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿ ಬರೆದ ಪತ್ರವೊಂದು ಬೀದರ್‌ನಲ್ಲಿ ವೈರಲ್ ಆಗಿದೆ.
ಉತ್ತರ ಪತ್ರಿಕೆಯಲ್ಲಿಯೇ ವಿದ್ಯಾರ್ಥಿ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಈ ಪತ್ರ ಬರೆದಿದ್ದು, ಹಿಂದಿ ಪತ್ರಿಕೆಯ ಮೌಲ್ಯಮಾಪನದ ವೇಳೆ ಪತ್ರ ಬಹಿರಂಗವಾಗಿದೆ.
ಹಿಂದಿ ವಿಷಯದಲ್ಲಿ 80 ಅಂಕ ಕೊಡಿ. ಇಲ್ಲವೆಂದರೆ ನಾನು ಸತ್ತು ಹೋಗುತ್ತೇನೆ. ಟೀಚರ್ ನನ್ನನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ. ಕಡಿಮೆ ಅಂಕ ಬಂದರೆ ನನ್ನ ತಂದೆ, ತಾಯಿಯನ್ನು ಅಗೌರವದಿಂದ ನೋಡುತ್ತಾರೆ. ಅದನ್ನು ನಾನು ಸಹಿಸಿಕೊಳ್ಳುವುದಿಲ್ಲ. ದಯವಿಟ್ಟು ನನಗೆ 80 ಅಂಕ ನೀಡಿ. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ವಿದ್ಯಾರ್ಥಿ ಬರೆದ ಪತ್ರದಲ್ಲಿ ಉಲ್ಲೇಖಿತವಾಗಿದೆ.