ಬೀದರ್ | ಮಾರಕಾಸ್ತ್ರ ಹಿಡಿದು ಬೆದರಿಸಿದ ಆರೋಪ: ಇಬ್ಬರ ಬಂಧನ

Update: 2025-04-04 09:53 IST
ಬೀದರ್ | ಮಾರಕಾಸ್ತ್ರ ಹಿಡಿದು ಬೆದರಿಸಿದ ಆರೋಪ: ಇಬ್ಬರ ಬಂಧನ
  • whatsapp icon

ಬೀದರ್ : ಬಸವ ಕಲ್ಯಾಣ ನಗರದ ತ್ರಿಪುರಾಂತನಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಹೊಟೆಲ್ ಹಾಗೂ ಅಂಗಡಿಗಳ ಮಾಲಕರಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶೇಖರ್ ಮತ್ತು ಆಶೀಸ್ ಬಂಧಿತ ಆರೋಪಿಗಳಾಗಿದ್ದಾರೆ.

ಎ.1ರ ರಾತ್ರಿ ಕೈಯಲ್ಲಿ ಮಾರಾಕಾಸ್ತ್ರ ಹಿಡಿದುಕೊಂಡು ಬಸವ ಕಲ್ಯಾಣದ ಹೋಟೆಲ್ ಮತ್ತು ಅಂಗಡಿಗಳಿಗೆ ತೆರಳಿ ಮಾಲಕರಿಗೆ ಬೆದರಿಕೆ ಹಾಕಿ ಅವುಗಳನ್ನು ಮುಚ್ಚುವ ಪ್ರಯತ್ನ ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ಅಂಗಡಿಗಳ ಮಾಲಕರು ಪೊಲೀಸರಿಗೆ ಮಾಹಿತಿ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿರುವ ಬಸವಕಲ್ಯಾಣ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News