ಬೀದರ್ | ಸಿಡಿಲು ಬಡಿದು ಎರಡು ಎತ್ತುಗಳು ಬಲಿ
Update: 2025-04-25 20:46 IST

ಬೀದರ್ : ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟ ಘಟನೆ ಬೀದರ್ ತಾಲ್ಲೂಕಿನ ಮಿರ್ಜಾಪುರ್ ಗ್ರಾಮದಲ್ಲಿ ನಡೆದಿದೆ.
ಮೃತ ಎತ್ತುಗಳು ಮಿರ್ಜಾಪುರ್ ಗ್ರಾಮದ ನಿವಾಸಿ ಪಾಷಾಮಿಯಾ ವಜಿರ್ ಸಾಹಬ್ ಎಂಬುವವರಿಗೆ ಸೇರಿವೆ.
ಎತ್ತುಗಳನ್ನು ಊರಿನ ಪಕ್ಕದ ಹೊಲದಲ್ಲಿರುವ ಮರಕ್ಕೆ ಕಟ್ಟಿದ್ದೇವು. ಈ ಎತ್ತುಗಳು ಸುಮಾರು 1 ಲಕ್ಷ 70 ರೂ. ಬೆಲೆಯುಳ್ಳದ್ದಾಗಿದ್ದವು. ಇಂದು ಮಧ್ಯಾಹ್ನ ಎತ್ತುಗಳ ಮೇಲೆ ಸಿಡಿಲು ಬಿದ್ದು ಮೃತಪಟ್ಟಿದೆ ಎಂದು ಪಾಷಾಮಿಯಾ ಅವರ ಸಹೋದರ ಮೌಜುಮಿಯಾ ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜನವಾಡಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.