ಬೀದರ್ | ಸಿಡಿಲು ಬಡಿದು ಎರಡು ಎತ್ತುಗಳು ಬಲಿ
Update: 2025-04-25 23:02 IST

ಬೀದರ್ : ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟ ಘಟನೆ ಔರಾದ್ ತಾಲ್ಲೂಕಿನ ಮಮದಾಪೂರ್ ಗ್ರಾಮದಲ್ಲಿ ನಡೆದಿದೆ.
ಮೃತ ಎತ್ತುಗಳು ಮಮದಾಪುರ್ ಗ್ರಾಮದ ಹಾವಯ್ಯಾ ತಂದೆ ಬಸಯ್ಯಾ ಇವರಿಗೆ ಸೇರಿವೆ. ಇಂದು ಮಧ್ಯಾಹ್ನ ಸುರಿದ ಗುಡುಗು ಸಹಿತ ಮಳೆಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ. ಈ ಎತ್ತುಗಳ ಬೆಲೆ ಸೂಮಾರು 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಅನ್ವರ್ ಜಕಾತಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.