ಬೀದರ್ | ಕಾರು ಢಿಕ್ಕಿ; ಬೈಕ್ ಗೆ ಸವಾರನಿಗೆ ಗಾಯ

Update: 2025-04-27 23:22 IST
ಬೀದರ್ | ಕಾರು ಢಿಕ್ಕಿ; ಬೈಕ್ ಗೆ ಸವಾರನಿಗೆ ಗಾಯ

ಸಾಂದರ್ಭಿಕ ಚಿತ್ರ

  • whatsapp icon

ಬೀದರ್ : ರಸ್ತೆಯಲ್ಲಿ ಚಲಿಸುತಿದ್ದ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಾಯವಾದ ಘಟನೆ ಇಂದು ಭಾಲ್ಕಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಬಳಿ ನಡೆದಿದೆ.

ಹುಲಸೂರ್ ತಾಲ್ಲೂಕಿನ ಗೋರ್ಟಾ ಗ್ರಾಮದ ನಿವಾಸಿ ದಯಾನಂದ್ ಹಂಸಂಗೆ ಘಟನೆಯಲ್ಲಿ ಗಾಯಗೊಂಡ ಬೈಕ್ ಸವಾರನಾಗಿದ್ದಾ‌ನೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಖಟಕಚಿಂಚೋಳಿ ಪಿಎಸ್ಐ ಸುದರ್ಶನ ರೆಡ್ಡಿ‌ ನೇತೃತ್ವದ ಪೊಲೀಸರ ತಂಡವು ಗಾಯಾಳು ವ್ಯಕ್ತಿಗೆ ತಮ್ಮ ಪೊಲೀಸ್ ಜೀಪನಲ್ಲಿಯೇ ಹತ್ತಿರದ ಮುಚಳಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಆದರೆ ಆರೋಗ್ಯ ಕೇಂದ್ರದಲ್ಲಿ ವೈದ್ಯ, ಸಿಬ್ಬಂದಿ ಯಾರು ಇಲ್ಲದೆ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಇದರಿಂದಾಗಿ ವೈದ್ಯರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News