ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಶಾ ಕ್ಷಮೆಯಾಚಿಸಿ, ರಾಜೀನಾಮೆ ನೀಡಲು ಎನ್ಎಸ್‌ಯುಐ ಒತ್ತಾಯ

Update: 2024-12-18 15:06 GMT

ಬೀದರ್ : ಅಂಬೇಡ್ಕರ್ ರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಎನ್ಎಸ್‌ಯುಐ ಪ್ರತಿಭಟನೆ ನಡೆಸಿದೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆಗಿಳಿದ ಎನ್ಎಸ್‌ಯುಐ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ. ಅಂಬೇಡ್ಕರ್ ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದುದ್ದಕ್ಕೂ ಸ್ವರ್ಗ ಸಿಗುತಿತ್ತು ಎಂಬ ಅಮಿತ್ ಶಾ ಅವರ ಹೇಳಿಕೆ ಅಂಬೇಡ್ಕರ್ ವಿರೋಧಿ ಮನೋಭಾವದಿಂದ ಕೂಡಿದೆ ಎಂದು ಆಕ್ರೋಶ ಹೊರ ಹಾಕಿದರು.

ಅಮಿತ್ ಶಾ ಅವರ ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿಹೇಳುತ್ತದೆ ಎಂದು ಅವರ ಹೇಳಿಕೆಯನ್ನು ಖಂಡಿಸಿದೆ.

ಈ ಸಂದರ್ಭದಲ್ಲಿ ಎನ್ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಫೀರೋಜ್ ಖಾನ್, ಪ್ರಚಾರ್ ಸಮಿತಿ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ್ ಚಿಮಕೋಡೆ, ಉಪಾಧ್ಯಕ್ಷ ಮುಕೇಶ್ ಚಲ್ವಾ, ಭೀಮರಾವ್ ಮಾಲಗತ್ತಿ, ಲೊಕೇಶ್ ದೊಮ್ಮೆ ವಿಶಾಲ್ ಕುದ್ರೆ, ನಗರ ಅಧ್ಯಕ್ಷ ಸಿದ್ದಾರ್ಥ ಭಾವಿದೊಡ್ಡಿ, ಎನ್ಎಸ್‌ಯುಐ ಪಶು ವೈದ್ಯಕೀಯ ಕಾಲೇಜು ಅಧ್ಯಕ್ಷರಾದ ಇಮ್ರಾನ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌತಮ್ ಮುತ್ತಂಗಿಕರ್, ಸಚೀನ್ ಶೇಟ್ಕರ್, ಬೀದರ್ ದಕ್ಷಿಣದ ಅಧ್ಯಕ್ಷ ಆದಿತ್ಯ ದಂಡಿ, ಕಾರ್ಯಕರ್ತರಾದ ಹಾಲಿದ್ ಪೈಲವಾನ್, ಸತೀಶ್, ರಾಜಕುಮಾರ್, ವಿಶಾಲ್, ಪ್ರಮೋದ್, ಪವನ ಹಾಗೂ ಮತ್ತಿತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News