ಯಾದಗಿರಿ | ಆಟೋ-ಬೈಕ್ ನಡುವೆ ಢಿಕ್ಕಿ : ಇಬ್ಬರು ಮೃತ್ಯು
Update: 2025-04-19 20:13 IST

ಯಾದಗಿರಿ : ಆಟೋ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಆಟೋದಲ್ಲಿದ್ದ ಪ್ರಯಾಣಿಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಮುಂಡರಗಿ ಬಳಿ ನಡೆದಿದೆ.
ಮೃತರನ್ನು ಬಸವರಾಜ (55) ಮತ್ತು ಅಂಜಿ (45) ಎಂದು ಗುರುತಿಸಲಾಗಿದೆ.
ಯಾದಗಿರಿಯಿಂದ ಮುಂಡರಗಿ ಕಡೆ ಚಲಿಸುತ್ತಿದ್ದ ಅಟೋ ಮತ್ತು ಯಾದಗಿರಿ ಕಡೆಗೆ ಹೊರಡುತ್ತಿದ್ದ ಬೈಕ್ ಮುಖಮುಖಿ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.