ಪ್ಯಾರಿಸ್ ಒಲಿಂಪಿಕ್ಸ್ | ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹರಾವತ್

Update: 2024-08-09 17:58 GMT

Photo : x@sportstarweb

ಪ್ಯಾರಿಸ್ :  57 ಕೆ.ಜಿ. ವಿಭಾಗದ ಪುರಷರ ಫ್ರೀ ಸ್ಟೈಲ್ ವಿಭಾಗದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪ್ಯೂರ್ತೋರಿಕೋ ದೇಶದ ಡೇರಿಯನ್ ಕ್ರೂಝ್ ಅವರನ್ನು 13-5 ಅಂಕಗಳಿಂದ ಸೋಲಿಸಿ ಭಾರತದ ಅಮನ್ ಸೆಹರಾವತ್ ಕಂಚು ಗೆದ್ದರು.

ಪ್ಯಾರಿಸ್ ಒಲಿಂಪಿಕ್ಸ್ ನ ಅತ್ಯಂತ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕುಸ್ತಿಪಟು ಜಪಾನ್‌ನ ರೇ ಹಿಗುಚಿ ವಿರುದ್ಧ ಸೋತಿದ್ದರು.

ಪ್ಯಾರಿಸ್ ಒಲಿಂಪಿಕ್ ನ ಕಂಚಿನ ಪದಕದೊಂದಿಗೆ, ಭಾರತವು 2008 ರಿಂದ ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಆವೃತ್ತಿಯಲ್ಲಿ ಕುಸ್ತಿಯಲ್ಲಿ ಪದಕವನ್ನು ಗೆಲ್ಲುವುದನ್ನು ಮುಂದುವರೆಸಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News