ಹಿರಿಯ ಕಾಂಗ್ರೆಸಿಗ ಉಸ್ಮಾನ್ ಅಲಿ ನಿಧನ
Update: 2024-12-06 07:21 GMT
ಉಡುಪಿ, ಡಿ.6: ಉಡುಪಿ ಜಾಮಿಯಾ ಮಸೀದಿಯ ಜಮಾತಿನ ಹಿರಿಯ ಸದಸ್ಯ, ಹಿರಿಯ ಕಾಂಗ್ರೆಸಿಗ ಉಸ್ಮಾನ್ ಅಲಿ(77) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಮಣಿಪಾಲ ವಿ.ಪಿ. ನಗರದ ನಿವಾಸಿಯಾಗಿರುವ ಇವರು ಉಡುಪಿ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಯಾಗಿ ಹಾಗೂ ಉಡುಪಿ ಜಾಮೀಯ ಮಸೀದಿ ಹಾಗೂ ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.