ಹೊರನಾಡು: ಭದ್ರಾ ನದಿಯಲ್ಲಿ ಮುಳುಗಿ 12ರ ಹರೆಯದ ಬಾಲಕಿ ಮೃತ್ಯು

Update: 2024-05-05 12:03 IST
ಹೊರನಾಡು: ಭದ್ರಾ ನದಿಯಲ್ಲಿ ಮುಳುಗಿ 12ರ ಹರೆಯದ ಬಾಲಕಿ ಮೃತ್ಯು
  • whatsapp icon

ಚಿಕ್ಕಮಗಳೂರು, ಮೇ 5: ಹೊರನಾಡು ಪ್ರವಾಸ ಬಂದಿದ್ದ ಬಾಲಕಿಯೊಬ್ಬಳು ಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಮೃತ ಬಾಲಕಿಯನ್ನು ತಮಿಳುನಾಡಿನ ಹೊಸೂರು ನಿವಾಸಿ ಜಾಹ್ನವಿ (12) ಎಂದು ಗುರುತಿಸಲಾಗಿದೆ.

ಜಾಹ್ನವಿ ಕುಟುಂಬಸ್ಥರ ಜೊತೆ ಹೊರನಾಡು ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಕಳಸ-ಹೊರನಾಡು ರಸ್ತೆ ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬಾಳೆಯಲ್ಲಿ ಸ್ನಾನ ಮಾಡಿ ಅನ್ನಪೂರ್ಣೇಶ್ವರಿ ದರ್ಶನ ಮಾಡಲು ಮುಂದಾಗಿತ್ತು. ಅದರಂತೆ ಕುಟುಂಬದವರೆಲ್ಲ ನದಿಗಿಳಿದು ಸ್ನಾನ ಮಾಡುತ್ತಿದ್ದಾಗ ಜಾಹ್ನವಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾಳೆ. ತಕ್ಷಣ ನೀರಿನಿಂದ ಮೇಲಕ್ಕೆ ಎಳೆದರೂ ಬಾಲಕಿ ತೀವ್ರ ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News