ಬಿಐಟಿಯಲ್ಲಿ ಎ.12ರಂದು ‘ಟ್ಯಾಲೆಂಟ್ ಹಂಟ್-2025’

ಮಂಗಳೂರು, ಎ.9: ಬ್ಯಾರೀಸ್ ಎಜ್ಯುಕೇಶನ್ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣಾ ಪರೀಕ್ಷೆ ‘ಟ್ಯಾಲೆಂಟ್ ಹಂಟ್-2025’ ಅನ್ನು ಎ.12ರಂದು ಬೆಳಗ್ಗೆ 9:30ಕ್ಕೆ ಇನೋಳಿಯ ಬ್ಯಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ(ಬಿಐಟಿ)ಯಲ್ಲಿ ಆಯೋಜಿಸಲಾಗಿದೆ.
ಅತ್ಯುತ್ತಮ ಮತ್ತು ಅರ್ಹ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ (ಆರ್ಟಿಟೆಕ್ಚರ್ ) ಶಿಕ್ಷಣದ ಆಕಾಂಕ್ಷಿಗಳಿಗೆ ಬೋಧನಾ ಶುಲ್ಕದ ಮೇಲೆ ಶೇ. 100 ವರೆಗೆ ವಿದ್ಯಾರ್ಥಿ ವೇತನವನ್ನು ಬಿಐಟಿ (BIT ) ಹಾಗೂ ಬೀಡ್ಸ್ (BEADS) ಮೂಲಕ ಒದಗಿಸಲಾಗುವುದು.
ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಶುಲ್ಕದ ಮೇಲೆ ಶೇ. 10 ವಿದ್ಯಾರ್ಥಿ ವೇತನ ಪಡೆಯುತ್ತಾರೆ. ನೋಂದಣಿಗಾಗಿ ವಿದ್ಯಾರ್ಥಿಗಳು ತಮ್ಮ ಹೆಸರು , ಕಾಲೇಜಿನ ಹೆಸರು ಹಾಗೂ ಸ್ಥಳದ ವಿವರವನ್ನು ನೋಂದಣಿಗೆ 7259661177ಕ್ಕೆ ಎಸ್‌ಎಂಎಸ್ ಮಾಡಬಹುದಾಗಿದೆ.
ನೋಂದಣಿಗೆ ಅಂತಿಮ ದಿನಾಂಕ :2025 ಎ.10 ಸಂಜೆ 5:00 ಗಂಟೆ. ಅರ್ಹತೆ : ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಹೆಚ್ಚಿನ ವಿವರಗಳಿಗೆ ಸಂಪರ್ಕ ನಂಬ್ರ +919900066888 ಎಂದು ಪ್ರಕಟನೆ ತಿಳಿಸಿದೆ.