ಬೆಳ್ತಂಗಡಿ| ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನ: ಸುಮಾರು 47 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2025-04-17 22:58 IST
ಬೆಳ್ತಂಗಡಿ| ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನ: ಸುಮಾರು 47 ಮಂದಿಯ ವಿರುದ್ಧ ಪ್ರಕರಣ ದಾಖಲು
  • whatsapp icon

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೆರಾಡಿಯಲ್ಲಿ ʼಪುರುಷ ಕಟ್ಟುವʼ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಮರ ಉಡುಪು ಧರಿಸಿ ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಅಝಾನ್ ಅನ್ನು ಅವಹೇಳನ ಮಾಡಿದ ಪ್ರಕರಣಕ್ಕೆ‌ ಸಂಬಂಧಿಸಿದಂತೆ 17 ಮಂದಿ ಆರೋಪಿಗಳ ವಿರುದ್ಧ ಹಾಗೂ ಇದಕ್ಕೆ ಸಹಕರಿಸಿದ ಇತರ 20 ರಿಂದ 30 ಮಂದಿಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ಮನೆ ನಿವಾಸಿ ಮಹಮ್ಮದ್ ರಫೀಕ್ ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಸಾವ್ಯ ನಿವಾಸಿಗಳಾದ ವಸಂತ, ರಾಜೇಶ್, ಹರೀಶ್, ಪೆರಾಡಿ ನಿವಾಸಿಗಳಾದ ದಯಾನಂದ, ರಂಗನಾಥ, ಮೋಹನ್, ಶಮಿತ್, ರವಿ, ರಮೇಶ್ ಕುಲಾಲ್, ಸುರೇಶ್, ಅಶೋಕ ಕುಲಾಲ್, ಧನುಷ್ ಹರದೊಟ್ಟು, ಹರೀಶ್ ಬಂತೊಟ್ಟು, ರಮೇಶ್ ಆರ್.ಕೆ, ಸುರೇಶ್ ಬರೊಟ್ಟು, ಪ್ರಮೋದ್, ಪ್ರಕಾಶ್ ಪೆರಾಡಿ ಮತ್ತು ಇತರ 20 ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎ.14ರಂದು ರಾತ್ರಿ ವೇಳೆ ಪುರುಷ ಕಟ್ಟುನ‌ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಮರ ಉಡುಪು ಧರಿಸಿ ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಪವಿತ್ರವಾದ ಆಝಾನ್ ಅನ್ನು ಅವಹೇಳನ ಮಾಡಿ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ವೈಷಮ್ಯದ ಭಾವನೆಗಳನ್ನು ಉಂಟು ಮಾಡುವ ಉದ್ದೇಶದಿಂದ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಬಗ್ಗೆ ಕಲಂ 353(2) ಜೊತೆಗೆ 3(5) ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದೆ.

ಇಸ್ಲಾಂ ಧರ್ಮವನ್ನು ಅವಮಾನಿಸುವ ವೀಡಿಯೋ ಹರಿಬಿಟ್ಟ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಇದೀಗ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News