ವಿಶ್ವ ಬಂಟರ ಸಾಂಸ್ಕೃತಿಕ ವೈಭವ: ಬಂಟ್ವಾಳ ಪ್ರಥಮ, ಸುರತ್ಕಲ್ ದ್ವಿತೀಯ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಆಶ್ರಯದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿ ಇತ್ತೀಚೆಗೆ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ದಲ್ಲಿ ಬಂಟ್ವಾಳ ಬಂಟರ ಸಂಘ ಪ್ರಥಮ ಹಾಗೂ ಸುರತ್ಕಲ್ ಬಂಟರ ಸಂಘ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದೆ.
ಬಂಟ್ವಾಳ ಬಂಟರ ಸಂಘ 1 ಲಕ್ಷ ರೂ. ನಗದು ಮತ್ತು ಸುರತ್ಕಲ್ ಬಂಟರ ಸಂಘ 75 ಸಾವಿರ ರೂ.ನಗದು ಹಾಗೂ ತೃತೀಯ ಸ್ಥಾನ ಪಡೆದ ಬೆಂಗಳೂರು ಬಂಟರ ಸಂಘ ೫೦ ಸಾವಿರ ರೂ.ನಗದು, ನಾಲ್ಕನೆ ಬಹುಮಾನವನ್ನು ತಲಾ ೨೫ ಸಾವಿರ ರೂ.ನ.ತೆ ಜೆಪ್ಪು, ಮೀಂಜ ಮಂಜೇಶ್ವರ, ಗುರುಪುರ, ಕಾವೂರು, ತೋನ್ಸೆ ವಲಯ ಬಂಟರ ಸಂಘ ಪಡೆದಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಒಕ್ಕೂಟದ ದಾನಿ ಕನ್ಯಾನ ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ, ಸಹ ಸಂಚಾಲಕ ಕರ್ನೂರ್ ಮೋಹನ್ ರೈ, ಕ್ರೀಡಾ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಹ ಸಂಚಾಲಕ ಡಾ. ರೋಶನ್ ಕುಮಾರ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ತೀರ್ಪುಗಾರರಾಗಿ ಮಾನಸಿ ಸುಧೀರ್, ಪ್ರಥಮ ಪ್ರಸಾದ್ ರಾವ್, ದಿಲೀಪ್ ಶೆಟ್ಟಿ ಸಹಕರಿಸಿದ್ದರು.