ಫೆ.25ರಿಂದ 27ರವರೆಗೆ ಮಂಗಳೂರಿನಲ್ಲಿ ಡಿವೈಎಫ್ ಐ ರಾಜ್ಯ ಸಮ್ಮೇಳನ: ಸ್ವಾಗತ ಸಮಿತಿ ರಚನೆ

Update: 2023-12-06 11:32 GMT

ಮಂಗಳೂರು, ಡಿ.6: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಇದರ ಕರ್ನಾಟಕ ರಾಜ್ಯ ಸಮ್ಮೇಳನವು ಫೆಬ್ರವರಿ 25ರಿಂದ 27ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಇದರ ಸ್ವಾಗತ ಸಮಿತಿ ರಚನಾ ಸಭೆಯು ನಗರದ ಖಾಸಗಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ, ವಿಮರ್ಶಕ ಕೆ.ಫಣಿರಾಜ್, ಭಾರತದ ಬದಲಾವಣೆ ಚುನಾವಣೆಯಲ್ಲಿ ಮುಗಿದು ಹೋಗುವಂತಹದ್ದಲ್ಲ ಇಲ್ಲಿನ ಸಾಮಾಜಿಕ ಸ್ಥಿತಿಯ ಬದಲಾವಣೆಗೆ ಸಾಮಾಜಿಕ ಹೋರಾಟವೊಂದೇ ದಾರಿ. ಇಲ್ಲಿನ ಯುವಜನ ಚಳವಳಿಗೆ ಒಂದು ಇತಿಹಾಸವಿದೆ. ಭಾರತದಲ್ಲಿ ಭೂಮಿಗಾಗಿ, ಸ್ವಾತಂತ್ರ್ಯಕ್ಕಾಗಿ ಮತ್ತು ಅಭಿವ್ಯಕ್ತಿಗಾಗಿ ನಡೆದಿರುವ ಹೋರಾಟದಲ್ಲಿ ಯುವಜನರ ಪಾತ್ರ ದೊಡ್ಡದಿದೆ. ಭಾರತದ ಪ್ರಜೆಗಳಿಗೆ ಹಕ್ಕುಗಳನ್ನು ಸಮಾನವಾಗಿ ನೀಡಿದ ಸಂವಿಧಾನವು ಕೂಡ ಈ ದೇಶದ ಚಳವಳಿಗಳ ಕೊಡುಗೆ. ಅಂತಹ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿಯ ರಕ್ಷಣೆಯ ಹೋರಾಟದ ಪರಂಪರೆಯನ್ನು ಡಿವೈಎಫ್ಐ ಹೊಂದಿದೆ ಎಂದರು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಡಿವೈಎಫ್ಐ ತನ್ನ ಆರಂಭದ ಕಾಲದಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬದುಕಿನ ಜೊತೆಗೆ ನಿಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿವೈಎಫ್ಐ ಹೋರಾಟದ ಪಾಲು ಇದೆ. ಇಲ್ಲಿನ ಜನತೆಗೆ ಸಮಸ್ಯೆಗಳು ಎದುರಾದಾಗ ಡಿವೈಎಫ್ಐ ಅವರ ಜೊತೆ ಗಟ್ಟಿಯಾಗಿ ನಿಂತಿದೆ ಎಂದರು.

ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಡಾ.ಜೀವನ್ ರಾಜ್ ಕುತ್ತಾರ್, ರಝಾಕ್ ಮೊಂಟೆಪದವು ಉಪಸ್ಥಿತರಿದ್ದರು.

ಡಿವೈಎಫ್ಐನ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಹಿರಿಯ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಪ್ರೊ.ಶಿವರಾಮ್ ಶೆಟ್ಟಿ, ಪ್ರೊ.ಜೋಸ್ಲಿನ್ ಲೋಬೋ, ಡಾ.ವಸಂತ ಕುಮಾರ್, ಬಿ.ಎಂ.ಮಾಧವ, ಕೆ ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಡಾ.ಕೃಷ್ಣಪ್ಪ ಕೊಂಚಾಡಿ, ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಸಂಜೀವ ಬಳ್ಕೂರು, ಬಿ.ಎನ್.ದೇವಾಡಿಗ, ಶ್ಯಾಮ್ಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ವಾಸುದೇವ ಉಚ್ಚಿಲ, ಯೋಗೀಶ್ ನಾಯಕ್, ಬಿ.ಎಂ.ಭಟ್, ಪ್ಲೇವಿ ಕ್ರಾಸ್ತಾ ಅತ್ತಾವರ, ಮರ್ಲಿನ್ ರೇಗೋ, ಡಯಾನಾ ಡಿಸೋಜ ಪ್ಲೋರಿನ್ ಡಿಸೋಜ, ಸಿಲ್ವಿಯಾ ಸಿಕ್ವೇರ, ಮೆಲ್ವಿನ್ ಪಾಯಸ್, ಎನ್ ಇ ಮುಹಮ್ಮದ್, ಅಹ್ಮದ್ ಸಾಲಿ ಬಜ್ಪೆ, ಸುನಂದಾ ಕೊಂಚಾಡಿ, ತಾರನಾಥ್ ಗಟ್ಟಿ ಕಾಪಿಕಾಡ್, ಸುರೇಶ್ ಭಂಡಾರಿ, ಪುರುಷೋತ್ತಮ ಪೂಜಾರಿ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ, ರೇವಂತ್ ಕದ್ರಿ, ವಿನೀತ್ ದೇವಾಡಿಗ, ವಿನುಶ ರಮಣ ಭಟ್ ಮುಂತಾದವರು ಉಪಸ್ಥಿತರಿದ್ದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News