ಮಂಗಳೂರು: ಎಕ್ಸೆಲ್ ಎಂಆರ್ಐ ಡಯಾಗ್ನೋಸ್ಟಿಕ್ಸ್ ಸೆಂಟರ್ ಶುಭಾರಂಭ

ಮಂಗಳೂರು, ಎ.27: ನಗರದ ಬಲ್ಮಠದ ಎಸ್ಸಿಎಸ್ ಹಾಸ್ಪಿಟಲ್ ಪಕ್ಕದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡ ಎಕ್ಸೆಲ್ ಎಂಆರ್ಐ ಡಯಾಗ್ನೋಸ್ಟಿಕ್ಸ್ ಸೆಂಟರ್ (ಎ ಯುನಿಟ್ ಆಫ್ ಡಾಕ್ಟರ್ಸ್ ಎಂಆರ್ಐ ಪ್ರೈವೇಟ್ ಲಿಮಿಟೆಡ್) ರವಿವಾರ ಶುಭರಾಂಭಗೊಂಡಿತು.
ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ನೂತನ ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮುಖ್ಯ ಅತಿಥಿಯಾಗಿದ್ದರು.
ಕೇಂದ್ರದ ಸ್ಥಾಪಕ ನಿರ್ದೇಶಕರಾದ ಡಾ.ಆಲಮ್ ನವಾಝ್ ಮತ್ತು ಡಾ.ವರ್ಗೀಸ್ ಜೋ, ತಜ್ಞ ವೈದ್ಯರಾದ ಡಾ.ಜಯಕೃಷ್ಣನ್, ಡಾ.ಹೆರಾಲ್ಡ್ ಮಸ್ಕರೇನಸ್, ಡಾ.ಕೆ.ಆರ್.ಕಾಮತ್, ಡಾ.ಶೋಭಿತಾ, ಡಾ.ರಿಝ್ವಾನ್ ಅಹ್ಮದ್, ಡಾ.ಮುನೀರ್ ಅಹ್ಮದ್, ಡಾ.ಹಸೀಬ್ ಅಮನ್, ಡಾ.ಮುರಳೀಧರ್ ಎಡಿಯಾಲ್, ಡಾ.ಆರ್.ಎಲ್.ಕಾಮತ್, ಡಾ.ಭಾಸ್ಕರ ಶೆಟ್ಟಿ, ಡಾ.ದಿವಾಕರ, ಡಾ.ಜೀವರಾಜ ಸೊರಕೆ, ಡಾ.ತಾಜುದ್ದೀನ್, ಡಾ.ಥಾಮಸ್, ಡಾ.ಸಲೀಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ನಗರದಲ್ಲಿ ಉತ್ಕೃಷ್ಟ ದರ್ಜೆಯ ಎಂಆರ್ಐಗೆ ಬೇಡಿಕೆ ಇದ್ದು, ಎಕ್ಸೆಲ್ ಎಂಆರ್ಐ ನೂತನ ‘ಎಕ್ಸೆಲ್ ಎಂಆರ್ಐ ಡಯಾಗ್ನೋಸ್ಟಿಕ್ಸ್ ಸೆಂಟರ್’ನಲ್ಲಿ 32 ಮಂದಿ ತಜ್ಞ ವೈದ್ಯರು ಭೇಟಿಗೆ ಲಭ್ಯರಿರುತ್ತಾರೆ. ಸೆಂಟರ್ ಕಾರ್ಯಾರಂಭಗೊಳ್ಳುವುದರೊಂದಿಗೆ ಅಂತಹ ಬೇಡಿಕೆ ಇದೀಗ ನಿವಾರಣೆಯಾಗಿದೆ. ಅತ್ಯಾಧುನಿಕ ಎಂಆರ್ಐ ಮೆಷಿನ್ ಗಳನ್ನು ಈ ಕೇಂದ್ರದಲ್ಲಿ ಅಳವಡಿಸಲಾಗಿದ್ದು, ಇದರ ಮೂಲಕ ರೋಗಿಯ ದೇಹದ ಯಾವುದೇ ಭಾಗದಲ್ಲಿ ಅತೀ ಸೂಕ್ಷ್ಮ ಸಮಸ್ಯೆ ಇದ್ದರೂ ಅವುಗಳನ್ನು ಕಂಡು ಹಿಡಿದು, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ಎಂಆರ್ಐ ಮೆಷಿನ್ಗಳಲ್ಲಿ ರೋಗಿಗೆ ಸ್ಕ್ಯಾನ್ ಗೊಳಗಾಗುವ ಟನೆಲ್ ಕಿರಿದಾಗಿದ್ದು, ಆದರೆ ಎಕ್ಸೆಲ್ ನಲ್ಲಿಯ ಎಂಆರ್ಐ ಮೆಷಿನ್ನ ಸ್ಕಾನ್ ಟನೆಲ್ ವಿಶಾಲವಾಗಿದ್ದು, ಇದರಲ್ಲಿ ರೋಗಿಗಳಿಗೆ ಭೀತಿ ಇರುವುದಿಲ್ಲ ಎಂದು ಕೇಂದ್ರದ ಸ್ಥಾಪಕ ನಿರ್ದೇಶಕರಾದ ಡಾ.ಆಲಮ್ ನವಾಝ್ ಮತ್ತು ಡಾ.ವರ್ಗೀಸ್ ಜೋ ತಿಳಿಸಿದ್ದಾರೆ.