ಮಂಗಳೂರು: 'ನಿಧಿ ಲ್ಯಾಂಡ್'ನ ಐಶಾರಾಮಿ ವಸತಿ ಸಮುಚ್ಚಯ 'ಸ್ಕೈ ಗಾರ್ಡನ್'ಗೆ ಶಿಲಾನ್ಯಾಸ

ಮಂಗಳೂರು, ಎ.30: ಪ್ರಖ್ಯಾತ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇನ್ ಫ್ರಾಸ್ಟ್ರಕ್ಚರ್ ಡೆವಲಪರ್ಸ್ ನಗರದ ಲೇಡಿಹಿಲ್-ಚಿಲಿಂಬಿ ಮುಖ್ಯರಸ್ತೆಯಲ್ಲಿ ನಿರ್ಮಿಸಲಿರುವ ಐಶಾರಾಮಿ ವಸತಿ ಸಮುಚ್ಚಯ 'ಸ್ಕೈ ಗಾರ್ಡನ್'ಗೆ ಬುಧವಾರ ಬೆಳಗ್ಗೆ ಶಿಲಾನ್ಯಾಸ ನೆರವೇರಿತು.
ಇದೇ ಸಂದರ್ಭದಲ್ಲಿ ವಸತಿ ಸಮುಚ್ಚಯದ ಬ್ರೋಷರ್ ಅನ್ನು ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಶಾಂತ್ ಕೆ. ಸನಿಲ್ ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಿಯೋನಿಕ್ಸ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಭಾಸ್ಕರ್ ಮೊಯ್ಲಿ, ಮಂಗಳೂರಿನ ಬ್ರಹ್ಮಕುಮಾರೀಸ್ ಕೇಂದ್ರದ ಉಸ್ತುವಾರಿ ಬಿ.ಕೆ. ವಿಶ್ವೇಶ್ವರಿ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ ಮತ್ತಿತರರು ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದ್ದರು
ನೂತನ ಸ್ಕೈ ಗಾರ್ಡನ್ 33 ಮಹಡಿಗಳ ಅತ್ಯಾಧುನಿಕ ಸೌಲಭ್ಯಯುಳ್ಳ ಐಶಾರಾಮಿ ವಸತಿ ಸಮುಚ್ಚಯವಾಗಿದೆ. ತಳ ಹಾಗೂ ಮೇಲಿನ ತಳ ಅಂತಸ್ತಿನಲ್ಲಿ ಕಾರ್ ಪಾರ್ಕಿಂಗ್ ಮತ್ತು ಮೇಲಿನ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಸೌಲಭ್ಯಗಳನ್ನು ಒಳಗೊಂಡಿದೆ. ಸ್ಕೈ ಗಾರ್ಡನ್ ವಿಶಾಲವಾದ 3 ಬಿಎಚ್ ಕೆ, 4 ಬಿಎಚ್ ಕೆ, 5 ಬಿಎಚ್ ಕೆ ಅಪಾರ್ಟ್ ಮೆಂಟ್ ಗಳು ಹಾಗೂ ಎರಡು ಡ್ಯೂಪ್ಲೆಕ್ಸ್ ಅಪಾರ್ಟ್ ಮೆಂಟ್ ಗಳನ್ನು ಗ್ರಾಹಕರ ಆದ್ಯತೆಗೆ ಅನುಗುಣವಾಗಿ ನಿರ್ಮಿಸಿಕೊಡಲಾಗುವುದು ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಶಾಂತ್ ಕೆ. ಸನಿಲ್ ತಿಳಿಸಿದ್ದಾರೆ.
ಸ್ಕೈ ಗಾರ್ಡನ್ ನಿವಾಸಿಗಳಿಗೆ ಝೆನ್ ರೂಂ, ಯೋಗ, ಎರೋಬಿಕ್ಸ್, ಮಕ್ಕಳ ಅಧ್ಯಯನ ಕೊಠಡಿ, ಮಕ್ಕಳ ಆಟದ ಪ್ರದೇಶ, ವಾಕಿಂಗ್, ಜಾಗಿಂಗ್ ಟ್ರಾಕ್, ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನೇಶಿಯಂ, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್ ಟೇಬಲ್, ಚೆಸ್, ಕ್ಯಾರಮ್ ಮತ್ತಿತರ ಬೋರ್ಡ್ ಆಟಗಳ ಕೊಠಡಿ, ಕಾರ್ಡ್ಸ್ ರೂಮ್, ಮಿನಿ ಥಿಯೇಟರ್, ಸೌನಾ ಸ್ಟೀಮ್ ರೂಂ, ಜಕುಜಿ, ಕಟ್ಟಡದ ಪ್ರವೇಶ ದ್ವಾರದ ಬಳಿ ನೀರಿನ ಫೌಂಟೇನ್ ಹೊಂದಿರುವ ವೈಶಿಷ್ಟಯುತ ಗೋಡೆಗಳು, ಸಮ್ಮೇಳನ ಸಭಾಂಗಣ ಮತ್ತು ಇನ್ನೂ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಾಗಲಿವೆ ಎಂದು ತಿಳಿಸಿದರು.