ಮಂಗಳೂರು | ಮುಮ್ತಾಝ್ ಅಲಿ ಸ್ಮರಣಾರ್ಥ ರಕ್ತದಾನ ಶಿಬಿರ
Update: 2025-04-28 13:36 IST

ಮಂಗಳೂರು : ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಹಾಜಿ ಮುಮ್ತಾಝ್ ಅಲಿಯವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಮಸೀದಿ ವಠಾರದಲ್ಲಿ ಎ.27ರ ರವಿವಾರ ನಡೆಯಿತು.
ಎಸ್ಸೆಸ್ಸೆಫ್ ಬ್ಲಡ್ ಸೈಭೋ ಇದರ 336 ನೇ ಕ್ಯಾಂಪಿನ ಭಾಗವಾಗಿ ನಡೆದ ಈ ಶಿಬಿರದಲ್ಲಿ 86 ಯೂನಿಟ್ ರಕ್ತ ಸಂಗ್ರಹವಾಯಿತು.
ಕೃಷ್ಣಾಪುರ ಸಂಯುಕ್ತ ಖಾಝಿ ಅಲ್ ಹಾಜ್ ಇಬ್ರಾಹೀಂ ಮದನಿ ಉಸ್ತಾದ್ ದುಆ ಮೂಲಕ ಚಾಲನೆ ನೀಡಿದರು. ಕೃಷ್ಣಾಪುರ ಖತೀಬರಾದ ಫಾರೂಖ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಿದರು. ಮಾಜಿ ಶಾಸಕ ಮೊಯ್ದೀನ್ ಬಾವಾ, ಜಮಾಅತ್ ಪ್ರಧಾನ ಕಾರ್ಯದರ್ಶಿ ಬಿಎ ನಝೀರ್, ನವಾಝ್ ಸಖಾಫಿ ಅಡ್ಯಾರ್, ಅಬ್ದುರ್ರಹ್ಮಾನ್ ಹಾಜಿ ಮುಂತಾದ ಗಣ್ಯರು ಭಾಗವಹಿಸಿದ್ದರು.


