ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಆರೋಪಿಗಳ ಬಂಧನ
Update: 2025-04-23 22:36 IST

ಮಂಗಳೂರು, ಎ.23: ಕಾವೂರು ಜಂಕ್ಷನ್ ಬಳಿ ಮಂಗಳವಾರ ರಾತ್ರಿ ಸುಮಾರು 12:30ಕ್ಕೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಕಾವೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಫರಂಗಿಪೇಟೆಯ ಫಾಝ್ (24), ಕೇರಳ ತ್ರಿಶ್ಶೂರಿನ ಅರಟ್ಟುಪರಂಬಿಲ್‌ನ ಶರೀಫ್ ಎ.ಎಸ್. (25), ಸುಳ್ಯ ಗಾಂಧಿನಗರದ ಅಶ್ರಫ್ (24) ಬಂಧಿತರು.
ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಓಡಿ ತಪ್ಪಿಸಲು ಯತ್ನಿಸಿದ್ದರು. ತಕ್ಷಣ ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಫಾಝ್ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿದ್ದ ಎನ್ನಲಾಗಿದೆ. ಬಳಿಕ ಮೂವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಫಾಝ್ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.