ಬೆಳ್ತಂಗಡಿ | ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ಅಸ್ತಿತ್ವಕ್ಕೆ; ಬೃಹತ್ ಪ್ರತಿಭಟನೆಗೆ ನಿರ್ಧಾರ

ಬೆಳ್ತಂಗಡಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ವಿವಾದಿತ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸಲು ಬೆಳ್ತಂಗಡಿ ತಾಲೂಕಿನಲ್ಲಿ ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಬೆಳ್ತಂಗಡಿ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ತಾಲೂಕಿನ ಮುಸ್ಲಿಮ್ ಮುಖಂಡರು ಹಾಗೂ ಯುವಜನ ನಾಗರಿಕ ವೇದಿಕೆ (YCF)ಯನ್ನು ಒಳಗೊಂಡು ನಡೆದ ಸಭೆಯಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಸೈಯದ್ ಜಿಫ್ರಿ ತಂಙಳ್ ದಾರುಸ್ಸಲಾಮ್ ಬೆಳ್ತಂಗಡಿ ಹಾಗೂ ಪ್ರಮುಖ ಸಾದಾತುಗಳ ನೇತೃತ್ವದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ವೇಣೂರಿನ ಪೆರಾಡಿಯಲ್ಲಿ 'ಪುರುಷ ಕಟ್ಟುವ' ಹೆಸರಿನಲ್ಲಿ ಮುಸ್ಲಿಮ್ ಧರ್ಮವನ್ನು ಮತ್ತು ಪ್ರವಾದಿಯನ್ನು ಅವಹೇಳನ ಮಾಡಿರುವವರ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಲು ಸಭೆ ತೀರ್ಮಾನಿಸಿತು.
ತಾಲೂಕಿನಲ್ಲಿ ಪದೇ ಪದೇ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಲವು ಘಟನೆಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಮತ್ತು ಶಾಂತಿ ಭಂಗ ನಡೆಸಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿರುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಭಯಮುಕ್ತ ತಾಲೂಕನ್ನಾಗಿ ಮಾಡಲು ಎಲ್ಲರು ಶ್ರವಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ನಝೀರ್ ಅಝ್ಹರಿ ಬೊಳ್ಳಿನಾರ್ ದುಆ ನೆರವೇರಿಸಿದರು. ಅಡ್ವೊಕೇಟ್ ನವಾಝ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೆ.ಕೆ.ಶಾಹುಲ್ ಹಮೀದ್, ಅಝೀಝ್ ಝುಹ್ರಿ ಕಿಲ್ಲೂರು, ನಝೀರ್ ಬೆಳ್ತಂಗಡಿ, ಅಬ್ಬಾಸ್ ಬಟ್ಲಡ್ಕ, ಬಿ.ಎಂ. ಹಮೀದ್, ಅಕ್ಬರ್ ಬೆಳ್ತಂಗಡಿ, ನಿಝಾರ್ ಕುದ್ರಡ್ಕ, ರಹ್ಮಾನ್ ಪಡ್ಪು, ಅಬ್ದುಲ್ಲ ಕೆ.ಎಸ್., ನವಾಝ್ ಕಟ್ಟೆ, ಹಕೀಂ ಕೊಕ್ಕಡ, ಸಾದಿಕ್ ಮಲೆಬೆಟ್ಟು, ರಝಾಕ್ ಕನ್ನಡಿಕಟ್ಟೆ, ಸಿದ್ದೀಕ್ ಕಾಜೂರು, ಖಾಲಿದ್ ಪುಲಾಬೆ, ಹನೀಫ್ ಪುಂಜಾಲಕಟ್ಟೆ, ದಾವೂದ್ ಜಿ. ಕೆರೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಬೂಬಕರ್ ಹಾಜಿ ಪರಪ್ಪು, ಎನ್.ಎಸ್.ಉಮರ್, ಇಸುಬು ಇಳಂತಿಲ, ಅಯ್ಯೂಬ್ ಕರಾಯ, ಹಾರಿಸ್ ಹನೀಫಿ, ಖಾಲಿದ್ ಕೆ.ಎಚ್., ಝಕರಿಯ ಮುಸ್ಲಿಯಾರ್, ಇಬ್ರಾಹೀಂ ಮುಸ್ಲಿಯಾರ್, ಆಲಿಯಬ್ಬ ಪುಲಾಬೆ, ಹನೀಫ್ ಪಿ., ಇಸಾಕ್ ಅಹ್ಮದ್, ಅಬ್ದುಲ್ ರವೂಫ್, ರಶೀದ್ ಮಡಂತ್ಯಾರ್, ಫಯಾಝ್, ಅರ್ಫಾಝ್, ನಸೀಬ್, ಅಬ್ದುಲ್ ಹಮೀದ್, ಕಲಂದರ್, ಪುತ್ತುಮೋನು, ಮುಬೀನ್ ಉಪಸ್ಥಿತರಿದ್ದರು.
ಅಬ್ದುಲ್ ಕರೀಮ್ ಸ್ವಾಗತಿಸಿದರು. ಹಕೀಮ್ ಕೊಕ್ಕಡ ವಂದಿಸಿದರು.