ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: ಸಹಕಾರ ರತ್ನ ಡಾ. ಎಂ. ಎನ್ .ರಾಜೇಂದ್ರ ಕುಮಾರ್ ಬಣಕ್ಕೆ ಭರ್ಜರಿ ಜಯ

ಡಾ.ಎಂ.ಎನ್.ರಾಜೇಂದ್ರ ಕುಮಾರ್
ಮಂಗಳೂರು:ಕನ್ನಡ ಜಿಲ್ಲೆಯ ಪ್ರತಿಷ್ಠಿತ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸಹಕಾರ ರತ್ನ ಡಾ. ಎಂ. ಎನ್ .ರಾಜೇಂದ್ರ ಕುಮಾರ್ ಬಣಕ್ಕೆ ಭರ್ಜರಿ ಜಯ ಲಭಿಸಿದೆ.
ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ದ.ಕ ಮತ್ತು ಉಡುಪಿ ಎರಡು ಜಿಲ್ಲೆಗಳ ನಿರ್ದೇಶಕರ 16 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್ ಬಣದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದರು.
ಚುನಾವಣಾಧಿಕಾರಿ ರಾಜು ಕೆ ಫಲಿತಾಂಶ ಪ್ರಕಟಿಸಿದರು.
ಅದರಲ್ಲೂ ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ ರಾಜೇಂದ್ರ ಕುಮಾರ್ ಬಣದ 8 ಮಂದಿಯೂ ಜಯ ಗಳಿಸಿದ್ದಾರೆ.
ರಾಜೇಂದ್ರ ಕುಮಾರ್ ಬಳಗದ ರವಿರಾಜ ಹೆಗ್ಡೆ (ಕೊಡವೂರು), ದೇವಿಪ್ರಸಾದ್ ಶೆಟ್ಟಿ(ಬೆಳಪು), ಎಸ್. ಪ್ರಕಾಶ್ಚಂದ್ರ ಶೆಟ್ಟಿ (ಮೇಕೊಡು), ಉದಯ ಎಸ್. ಕೋಟ್ಯಾನ್(ಇರ್ವತ್ತೂರು), ಸುಧಾಕರ್ ಶೆಟ್ಟಿ (ಮುಡಾರು), ಎನ್. ಮಂಜಯ್ಯ ಶೆಟ್ಟಿ (ಹುಣ್ಸೆಮಕ್ಕಿ) ಕೆ. ಶಿವಮೂರ್ತಿ (ಕೋಟತಟ್ಟು ಪಡುಕೆರೆ) , ಉಡುಪಿಯ ಮಹಿಳಾ ಮೀಸಲು ಕ್ಷೇತ್ರದಿಂದ ಮಮತಾ ಆರ್. ಶೆಟ್ಟಿ (ಕ್ರೋಢಬೈಲೂರು) ಜಯ ಗಳಿಸಿದ್ದಾರೆ ಮತ್ತು ದ.ಕ ಜಿಲ್ಲೆಯ ಸುಚರಿತ ಶೆಟ್ಟಿ (ಕಡಂದಲೆ), ನಂದರಾಮ್ ರೈ(ಗುಡ್ಡೆಯಂಗಡಿ ) ಜಯ ಸಾಧಿಸಿದ್ದರೆ.
ಸಹಕಾರಿ ಭಾರತಿಯಲ್ಲಿ ಗುರುತಿಸಿಕೊಂಡ ಭರತ್ ಎನ್(ಯೇನಕಲ್ಲು), ಎಚ್. ಪ್ರಭಾಕರ್(ಆರಂಬೋಡು) ,ಎಸ್. ಬಿ. ಜಯರಾಮ ರೈ(ಕೆಯ್ಯೂರು) ,ಬಿ. ಸುಧಾಕರ ರೈ (ಬೋಳಂತೂರು) , ಚಂದ್ರಶೇಖರ ರಾವ್ (ಮಾಡ್ನೂರು) , ಸವಿತಾ ಎನ್ ಶೆಟ್ಟಿ (ಬಡಗಬೆಳ್ಳೂರು) ಸಾಧಿಸಿದ್ದಾರೆ.
ಆಯ್ಕೆಯಾಗಿರುವ ಎಲ್ಲರಿಗೂ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.