ಡಯಟ್‌ನಲ್ಲಿ ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆ

ಮಂಗಳೂರು: ಕರ್ನಾಟಕದಲ್ಲಿ ಕನ್ನಡ ನೆಲದ ಸಂಪನ್ಮೂಲಗಳ ನ್ನು ಬಳಸಿಕೊಂಡು ನಮ್ಮ ಜೀವನ ನಡೆಸುತ್ತೇವೆ. ಹೀಗಿರುವಾಗ ಕನ್ನಡದ ಋಣ ತೀರಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ನಗರ ಅಧ್ಯಕ್ಷ ರೇಮಂಡ್ ಡಿ ಕುನ್ಹಾ ತಾಕೊಡೆ ಹೇಳಿದ್ದಾರೆ.
ದ.ಕ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್‌ನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿ ವಿಭಾಗದ ಹಿರಿಯ ಉಪನ್ಯಾಸಕಿ ಫಾತಿಮಾಬಿ ಟಿ.ಐ. ಮಾತನಾಡಿ ಕನ್ನಡತನವೇ ಕನ್ನಡ ನಾಡಿನಲ್ಲಿ ಜೀವಿಸುವ ಕನ್ನಡಿಗರ ಅಸ್ಮಿತೆಯಾಗಿದೆ ಮತ್ತು ಸಹೋದರತೆ ಆಗಿದೆ ಎಂದರು.
ಡಯಟ್ ಸಂಸ್ಥೆಯ ಪ್ರಾಂಶುಪಾಲರಾದ ರಾಜಲಕ್ಷ್ಮೀ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ವಿಜಯಲಕ್ಷ್ಮೀ , ಚಂದ್ರಾವತಿ, ಶ್ರೀನಿವಾಸ ಅಡಿಗ, ಅನಿತಾ ಮತ್ತು ಪ್ರಥಮ ದರ್ಜೆ ಸಹಾಯಕರಾದ ಮನೋಜ್ ಶಿಬಾರ್ಲ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪೀತಾಂಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪುನೀತ್ ಸ್ವಾಗತಿಸಿ, ಸುಮೀರ ವಂದಿಸಿದರು, ಫಾತುಮಾ ಕಾರ್ಯಕ್ರಮ ನಿರೂಪಿಸಿದರು.