ಮಂಗಳೂರು: ಡಿ. 3ರಂದು ಪಿ.ಪಿ.ಗೋಮತಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ
ಮಂಗಳೂರು: ಕರ್ನಾಟಕ ಥಿಯಾಲಾಜಿಕಲ್ ರೀಸರ್ಚ್ ಇನ್ ಸ್ಟಿಟ್ಯೂಟ್, ಮಂಗಳೂರು ಹಾಗೂ ಪಿ.ಪಿ.ಗೋಮತಿ ಸ್ಮಾರಕ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಪಿ.ಪಿ.ಗೋಮತಿ ಸ್ಮರಣಾರ್ಥ ಡಿ. 3 ರಂದು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕವಿಯತ್ರಿ, ಲೇಖಕಿ, ಅನುವಾದಕಿ, ಜಾತಿ ವಿರೋಧಿ ಹೋರಾಟಗಾರ್ತಿ ಹಾಗೂ ಶಿಕ್ಷಣ ತಜ್ಞೆ ಡಾ. ಮೀನಾ ಕಂದಸ್ವಾಮಿ ಅವರು ʼಬರವಣಿಗೆಯಲ್ಲಿ ಪ್ರತಿರೋಧʼ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಸಮಾಜದಲ್ಲಿ ಯಾವುದೇ ಬಗೆಯ ಲಿಂಗ ಅಥವಾ ವರ್ಗ ತಾರತಮ್ಯವಿರಬಾರದು ಎಂಬ ಕನಸು ಕಂಡಿದ್ದ, ಮಂಗಳೂರಿನ ಬೆಸೆಂಟ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಪಿ.ಪಿ.ಗೋಮತಿ ಸ್ಮರಣಾರ್ಥ ಈ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
1984ರಲ್ಲಿ ಚೆನ್ನೈನಲ್ಲಿ ಜನಿಸಿದ ಮೀನಾ ಕಂದಸ್ವಾಮಿ ಅವರು ಆಂಡಿ ಪಂಡಾರಮ್ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ತಮ್ಮ ತಾಯಿಯ ಹೋರಾಟದಿಂದ ಸ್ಪೂರ್ತಿ ಪಡೆದಿರುವ ಮೀನಾ, ದಲಿತ ಚಳವಳಿಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದಾರೆ. ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ 2010ರಲ್ಲಿ ಸಾಮಾಜಿಕ ಭಾಷಾಶಾಸ್ತ್ರದಲ್ಲಿ ಪಿಎಚ್ ಡಿ ಪಡೆದಿರುವ ಡಾ. ಮೀನಾ ಕಂದಸ್ವಾಮಿ ಅವರ ಹಲವಾರು ಕೃತಿಗಳು 18 ಭಾಷೆಗಳಿಗೆ ಅನುವಾದಗೊಂಡಿವೆ.