ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಾ. ಯೋಗೇಶ್‌ ದುಬೆ ಭೇಟಿ

Update: 2023-08-10 14:21 GMT

ಮಂಗಳೂರು : ಕಡಬ ತಾಲೂಕು ಕೊಯಿಲ ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸ್ಪೆಶಲ್‌ ಮಾನಿಟರ್‌ ಡಾ. ಯೋಗೇಶ್‌ ದುಬೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯಲ್ಲಿರುವ ಎಂಡೋ ಬಾಧಿತರ ಅಂಕಿ ಅಂಶ, ಸಂತ್ರಸ್ಥರಿಗೆ ನೀಡಲಾಗುವ ಸೌಲಭ್ಯದ ಬಗ್ಗೆ ಪುತ್ತೂರು ತಾಲೂಕು ಅರೋಗ್ಯಾಧಿಕಾರಿ ಡಾ. ದೀಪಕ್ ರೈ, ಜಿಲ್ಲಾನೋಡಲ್‌ ಅಧಿಕಾರಿ ಡಾ.ನವೀನ್‌ ಚಂದ್ರ ಕುಲಾಲ್ ಮಾಹಿತಿ ನೀಡಿದರು.

ಪುನರ್ವಸತಿ ಕೇಂದ್ರವನ್ನು ಮುನ್ನಡೆಸುತ್ತಿರುವ ಬೆಳ್ತಂಗಡಿ ಸಿಯೋನ್ ಆಶ್ರಮ ಟ್ರಸ್ಟ್‌ನ ವ್ಯವಸ್ಥಾಪಕ ಜಾಕ್ಸನ್ ಪುನರ್ವಸತಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ, ಪುತ್ತೂರು ತಾಪಂ ಇಒ ನವೀನ್ ಭಂಡಾರಿ, ಸಜೀವುದ್ದಿನ್ ಜಿಲ್ಲಾ ಸಂಯೋಜಕರು ಎಂಡೋಸಲ್ಫಾನ್, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ಪ್ರಯಾಗ್, ಬಿಆರ್‌ಸಿಗಳಾದ ತನುಜ, ಸೀತಮ್ಮ, ಪುನರ್ವಸತಿ ಕೇಂದ್ರದ ಸಿಬ್ಬಂದಿಗಳಾದ ರಜಿನ್, ಸಮಿತಾ, ಶೈನಿ, ಯಶ್ವಿತಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News