ಕೆ.ಎಂ.ನೂರುಲ್ಲಾ ನಿಧನ

Update: 2025-04-18 09:43 IST
ಕೆ.ಎಂ.ನೂರುಲ್ಲಾ ನಿಧನ

ಕೆ.ಎಂ.ನೂರುಲ್ಲಾ

  • whatsapp icon

ಮಂಗಳೂರು : ನಗರದ ಮೆಸ್ಕಾಂನ ಮಾಜಿ ವಿದ್ಯುತ್ ಗುತ್ತಿಗೆದಾರ, ಸಮಾಜ ಸೇವಕ ಕೆ.ಎಂ.ನೂರುಲ್ಲಾ(89) ಅವರು ಇಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಗರದ ಮಂಗಳಾದೇವಿ ಸಮೀಪದ ಮಂಗಳ ನಗರದ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

ಇವರು ಬೋಳಾರ ಇಸ್ಲಾಮಿಕ್‌ ಸೆಂಟರ್‌ನ ಟ್ರಸ್ಟಿಯಾಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಇದರ ಸದಸ್ಯರಾಗಿದ್ದಾರೆ. 1960ರ ದಶಕದಿಂದ ಪ್ರಮುಖ ವಿದ್ಯುತ್ ಗುತ್ತಿಗೆದಾರರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘವು ಇವರಿಗೆ "ವರ್ಷದ ಅತ್ಯುತ್ತಮ ಗುತ್ತಿಗೆದಾರ" ಪ್ರಶಸ್ತಿ ನೀಡಿ ಗೌರವಿಸಿದೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ಪತ್ನಿ, ನಾಲ್ವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಶುಕ್ರವಾರ ಜುಮಾ ನಮಾಝ್ ಬಳಿಕ ಬೋಳಾರ ಜುಮಾ ಮಸೀದಿಯಲ್ಲಿ 2 ಗಂಟೆಗೆ ಜನಾಝ ನಮಾಝ್ ನಂತರ ದಫನ ಕಾರ್ಯ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News

ಅಫ್ಝಲ್ ಅಲಿ

ಅಫ್ಝಲ್ ಅಲಿ

ಚಂದ್ರಶೇಖರ್