ಜಾಫರ್ ಕಂಡತ್‌ಪಳ್ಳಿ
Update: 2025-03-14 21:37 IST

ಮಂಗಳೂರು, ಮಾ.14: ಕುದ್ರೋಳಿ ಜಾಮಿಯಾ ಜಮಾಅತ್‌ಗೆ ಒಳಪಟ್ಟ, ಕಂಡತ್ಪಳ್ಳಿ ಜುಮಾ ಮಸೀದಿಯ ಉಪಾಧ್ಯಕ್ಷರಾಗಿದ್ದ ಎಸ್.ಎಂ. ಜಾಫರ್ (78) ಗುರುವಾರ ನಿಧನರಾದರು.
ಪತ್ನಿ ಹಾಗೂ ಒಬ್ಬರು ಪುತ್ರ, ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ
ಕುದ್ರೋಳಿಯ ಜಾಮಿಯಾ ಮಸೀದಿಯ ಆವರಣದಲ್ಲಿ ಶುಕ್ರವಾರ ದಫನ ಕಾರ್ಯ ನೆರವೇರಿಸಲಾಯಿತು.
*ಮುಸ್ಲಿಂ ಲೀಗ್ ಹಿರಿಯ ಸದಸ್ಯರಾಗಿದ್ದ ಜಾಫರ್‌ರ ನಿಧನಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಸಿ. ಅಬ್ದುಲ್ ರಹ್ಮಾನ್, ಜಿಲ್ಲಾ ಉಪಾಧ್ಯಕ್ಷ ಎಚ್. ಮುಹಮ್ಮದ್ ಇಸ್ಮಾಯಿಲ್, ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ, ಸಲೀಂ ಜಾವೀದ್ ಬಂದರ್, ಜಾಫರ್ ಬಂಟ್ವಾಳ ಸಂತಾಪ ವ್ಯಕ್ತಪಡಿಸಿದ್ದಾರೆ.