ಸೈಫುದ್ದೀನ್ ಹಾಜಿ
Update: 2025-03-18 18:07 IST

ಮಂಗಳೂರು, ಮಾ.18: ಉಪ್ಪಿನಂಗಡಿ ಸಮೀಪದ ಅಲಂಕಾರ್ ನಿವಾಸಿ ಸೈಫುದ್ದೀನ್ ಹಾಜಿ (68) ರವಿವಾರ ರಾತ್ರಿ ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಸುಮಾರು 30 ವರ್ಷದಿಂದ ಜುಬೈಲ್‌ನಲ್ಲಿ ಉದ್ಯಮಿಯಾಗಿದ್ದ ಸೈಫುದ್ದೀನ್ ಹಾಜಿ ಹಲವಾರು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಕೊಡುಗೈ ದಾನಿಯೂ ಆಗಿದ್ದು, ಅನೇಕ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.
ನಾಲ್ಕೈದು ವರ್ಷದಿಂದ ಊರಲ್ಲಿ ನೆಲೆಸಿದ್ದರು. ಕಡಬ ತಾಲೂಕಿನ ಕೊಂತೂರು ಜುಮಾ ಮಸೀದಿಯ ಆವಣರದಲ್ಲಿ ಅವರ ದಫನ ಕ್ರಿಯೆಯನ್ನು ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.