ಮುಡಾ ಪ್ರಕರಣ: ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್ ಗೆ ಈ.ಡಿ. ನೀಡಿದ್ದ ಸಮನ್ಸ್ ಗೆ ತಡೆಯಾಜ್ಞೆ ಮುಂದುವರಿಕೆ

ಬೆಂಗಳೂರು: ಮುಡಾ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ಪ್ರಶ್ನಿಸಿ ಸಚಿವ ಬೈರತಿ ಸುರೇಶ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಇಬ್ಬರಿಗೂ ನೀಡಿದ್ದ ಸಮನ್ಸ್ ಗೆ ತಡೆಯಾಜ್ಞೆಯನ್ನು ಫೆ.20ರವರೆಗೆ ವಿಸ್ತರಿಸಿ ಆದೇಶಿಸಿದೆ.
ವಿಚಾರಣೆ ಆರಂಭವಾಗುತ್ತದಂತೆ ಸಚಿವ ಬೈರತಿ ಸುರೇಶ್ ಪರ ಸಿವಿ ನಾಗೇಶ್, ಈ ಪ್ರಕರಣದಲ್ಲಿ .ಬೈರತಿ ಸುರೇಶ್ ಆರೋಪಿಯೇ ಇಲ್ಲ. ಸುರೇಶ್ ರಾಜ್ಯ ಸಚಿವರಾಗಿದ್ದಾರೆ. ಯಾವಾಗಲೋ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಬೈರತಿ ಸುರೇಶ್ ಪಾತ್ರ ಏನಿಲ್ಲ.ಈ ಪ್ರಕರಣದಲ್ಲಿ ಮನಿಲಾಂಡ್ರಿಂಗ್ ವ್ಯವಹಾರ ಎಲ್ಲಾಗಿದೆ.ಮನಿಲಾಂಡ್ರಿಂಗ್ ಪ್ರಶ್ನೆಯೆ ಈ ಪ್ರಕರಣಲ್ಲಿ ಬರೋದಿಲ್ಲ.ಹಿಗಿದ್ದರು ಇಡಿ ಈ ಪ್ರಕರಣದಲ್ಲಿ ನೋಟಿಸ್ ನೀಡಲು ಹೇಗೆ ಬರುತ್ತೆ.ಇಡಿ ಸುರೇಶ್ಗೆ ನೋಟಿಸ್ ನೀಡೋ ಮೂಲಕ ಅವರ ಖಾಸಗಿ ಮತ್ತು ವಯಕ್ತಿಕ ಹಿತಾಸಕ್ತಿಗೆ ದಕ್ಕೆಯಾಗಿದೆ ಎಂದು ವಾದಿಸಿದರು.
ನಂತರ ಅರ್ಜಿಗಳಿಗೆ ಆಕ್ಷೇಪಸಲ್ಲಿಸಲು ಕಾಲಾವಕಾಶ ಇಡಿ ಪರ ವಕೀಲರು ಮನವಿ ಮಾಡದರು. ಇದನ್ನು ಪರಿಗಣಿಸಿದ ಹೈಕೋರ್ಟ್ ವಿಚಾರಣೆಯನ್ನ ಫೆಬ್ರವರಿ 14ಕ್ಕೆಮುಂದೂಡಿ ಮಹತ್ವದ ಆದೇಶ ನೀಡಿದೆ. ಅಲ್ಲದೆ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.