ಗದಗ | ಕೃಷ್ಣಗೌಡ ಪಾಟೀಲ್ ಅವರಿಂದ ಶಾಲಾ ಕೊಠಡಿ ಲೋಕಾರ್ಪಣೆ
Update: 2025-03-16 10:58 IST

ಗದಗ : ಸ್ಥಳೀಯ ವೀರನಾರಾಯಣ ಬಡಾವಣೆಯ ಹಾಗೂ ಕೆ.ಎಚ್.ಪಾಟೀಲ್ ಬಡಾವಣೆಯ ಸರಕಾರಿ ಕಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ ನಂ.13 ರ ನೂತನ ಕೊಠಡಿಯ ಲೋಕಾರ್ಪಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅವರ ಪುತ್ರ ಹಾಗೂ ಕಾಂಗ್ರೆಸ್ ಯುವ ಸಮಿತಿಯ ಜಿಲ್ಲಾಧ್ಯಕ್ಷರಾದ ಕೃಷ್ಣೇಗೌಡ ಪಾಟೀಲ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ, ನಗರಸಭಾ ಸದಸ್ಯೆ ಲಲಿತಾ ಅಸೂಟಿ, ಬಿಇಓ ರವಿ ಶೆಟ್ಟಣ್ಣವರ, ಬಿ.ಆರ್.ಪಿ. ಪ್ರಕಾಶ ಮಂಗಳೂರು, ತನು ಹೂಗಾರ, ಸಂಗಮೇಶ ಮಂಗಳಾಗುಡ್ಡ, ಎಸ್. ಎಸ್. ಹುರಕಡ್ಲಿ ಹಾಗೂ ಶಿಕ್ಷಣ ಇಲಾಖೆ ಶಾಲಾ ಸಿಬ್ಬಂದಿಗಳು ಹಾಗೂ ಕೇದಾರಲಿಂಗೇಶ್ವರ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರು ಸರ್ವ ಸದಸ್ಯರುಗಳು, ಮುಸ್ಲಿಂ ಸಮಾಜದ ಗುರು ಹಿರಿಯರು ಹಾಗೂ ಬಡಾವಣೆಯ ಗುರು ಹಿರಿಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.