'ಜ್ಯೋತಿಬಾ ಫುಲೆ ಅವರ 'ಗುಲಾಮಗಿರಿ'ಗೆ (1873) 150 ವರ್ಷಗಳು' ಹೆಸರಿನಲ್ಲಿ ವಿಶೇಷ ಉಪನ್ಯಾಸ

Update: 2024-11-15 11:13 GMT

ಜ್ಯೋತಿಬಾ ಫುಲೆಯವರ ಪ್ರಮುಖ ಕೃತಿ 'ಗುಲಾಮಗಿರಿ' ಬಿಡುಗಡೆಯಾಗಿ 150 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ 'ನವಯಾನ ಟ್ರಸ್ಟ್' ಗುರುವಾರ 'ಜ್ಯೋತಿಬಾ ಫುಲೆ ಅವರ 'ಗುಲಾಮಗಿರಿ'ಗೆ (1873) 150 ವರ್ಷಗಳು' ಹೆಸರಿನಲ್ಲಿ ವಿಶೇಷ ಉಪನ್ಯಾಸ ಆಯೋಜಿಸಿತ್ತು. ಬೆಂಗಳೂರಿನ ಕರ್ನಾಕಟ ಚಿತ್ರಕಲಾ ಪರಿಷತ್ ನಲ್ಲಿರುವ ದೇವರಾಜ ಅರಸು ಆರ್ಟ್ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರಜ್ಞ ಪ್ರೊ. ವಲೇರಿಯನ್ ರೋಡ್ರಿಗಸ್ ಉಪನ್ಯಾಸ ನೀಡಿದರು.

ಜಾನಪದ ಹಾಡುಗಾರ್ತಿ ಮುಡುಬಿ, ಚಿಂತಕ ಡಾ.ಪ್ರವೀಣ್ ತಲ್ಲಪೆಳ್ಳಿ, ರಂಗಕರ್ಮಿ ಕೆಪಿ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದರು. ರಾಜಕೀಯ ಚಿಂತಕ ವಿ.ಎಲ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಫೋಟೋ ಕೃಪೆ: ಐವನ್ ಡಿಸಿಲ್ವ

Tags:    

Writer - ವಾರ್ತಾಭಾರತಿ

contributor

Editor - Mushina

A staff reporter

Web Editor at VarthaBharati

Byline - ವಾರ್ತಾಭಾರತಿ

contributor

Similar News