ಶಾರ್ಜಾ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ತುಂಬೆ ಮೊಯ್ದಿನ್ ಅವರಿಗೆ ಬಿಡಬ್ಲ್ಯೂಎಫ್ ವತಿಯಿಂದ ಸನ್ಮಾನ

Update: 2024-12-08 03:42 GMT

ಶಾರ್ಜಾ: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಿಂದ ಈ ವರ್ಷದ ಕರ್ನಾಟ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ತುಂಬೆ ಮೊಯ್ದಿನ್ ರವರನ್ನು ಸನ್ಮ್ಮಾನಿಸಲಾಯಿತು.

ತುಂಬೆ ವಿಲ್ಲಾ ಶಾರ್ಜಾ ದಲ್ಲಿ ಏರ್ಪಡಿಸಲಾಗಿದ್ದ ಮೀಟ್ & ಗ್ರೀಟ್ ಪಾರ್ಟಿಯಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಹಾಗೂ  ಬಿಡಬ್ಲ್ಯೂಎಫ್ ನ ಇತರ ಕಾರ್ಯಕರ್ತರು  ಶಾಲು ಹೊದಿಸಿ ಸ್ಮರಣಿಕೆ ನೀಡಿದರು.

ಹಂಝ ಕನ್ನಂಗಾರ್, ಮಜೀದ್ ಆಡಿಟರ್, ನವಾಜ್ ಉಚ್ಚಿಲ್, ಜಲೀಲ್ ಗುರುಪುರ, ಮುಜೀಬ್ ಉಚ್ಚಿಲ್, ಸಿರಾಜ್ ಪರ್ಲಡ್ಕ‌, ನಿಝಾಮ್ ವಿಟ್ಲ ಮತ್ತು ಮೊಯಿನುದ್ದೀನ್ ಹಂಡೇಲ್ ಉಪಸ್ಥಿತರಿದ್ದರು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News