‘ಅಭಿವ್ಯಕ್ತಿ’ ಉಚಿತ ಜರ್ನಲಿಸಂ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2024-06-18 06:35 GMT

ಬೆಂಗಳೂರು : ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್ ‘ಅಭಿವ್ಯಕ್ತಿ’ ಹೆಸರಿನ 9 ತಿಂಗಳ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಆಸಕ್ತ ಯುವಜನರಿಂದ ಅರ್ಜಿ ಆಹ್ವಾನಿಸಿದೆ.

ಪತ್ರಿಕೆ, ಸುದ್ದಿ ವಾಹಿನಿ, ಮನರಂಜನಾ ವಾಹಿನಿ, ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವ ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ. ಯುವತಿಯರಿಗೆ ವಿಶೇಷ ಆದ್ಯತೆ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸ್‌ ಅವಧಿಯಲ್ಲಿ ಸ್ಕಾಲರ್‌ಶಿಪ್‌ ಸಿಗಲಿದೆ.

ವರದಿಗಾರಿಕೆ, ಬರವಣಿಗೆಗೆ ಬೇಕಾದ ದೃಷ್ಟಿಕೋನ, ತಾಂತ್ರಿಕ ಕೌಶಲ್ಯದ ಜೊತೆಗೆ ಪ್ರಾಯೋಗಿಕ ಕಲಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜತೆಗೆ ಕಿರುತೆರೆ-ಹಿರಿತೆರೆಗಳಿಗೆ ಸೃಜನಶೀಲ ಸ್ಕ್ರಿಪ್ಟ್ ಬರವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್, ಪೇಜ್ ಡಿಸೈನಿಂಗ್ (ಪ್ರಿಂಟ್ / ವೆಬ್) ಬಗ್ಗೆ ಅನುಭವಿ ತಂತ್ರಜ್ಞರಿಂದ ತರಗತಿಗಳು ಇರಲಿವೆ.

ಮೊಬೈಲ್‌ ಜರ್ನಲಿಸಂ, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್, ಆನ್‌ಲೈನ್‌ ಜರ್ನಲಿಸಂನ ಆಧುನಿಕ ತಂತ್ರಜ್ಞಾನದ ಕೌಶಲ್ಯ ಕಲಿಕೆಯ ಜತೆಗೆ ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲಗಳ ಪ್ರಾಯೋಗಿಕ ಕಲಿಕೆಯನ್ನು ಕೋರ್ಸ್ ಒಳಗೊಂಡಿದೆ.

ಬೆಂಗಳೂರಿನ ಕನಕಪುರ ರಸ್ತೆ ಬಳಿಯ ಬಂಜಾರಪಾಳ್ಯದಲ್ಲಿರುವ ಕ್ಯಾಂಪಸ್‌ನಲ್ಲಿ  ವಸತಿಸಹಿತ (ರೆಸಿಡೆನ್ಷಿಯಲ್) ಕೋರ್ಸ್‌ ನಡೆಯಲಿದೆ. ಕ್ಯಾಂಪಸ್‌ನಲ್ಲಿ ಸುಸಜ್ಜಿತ ವಸತಿ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ ವ್ಯವಸ್ಥೆ ಇದ್ದು, ವೃತ್ತಿಪರ ಮೆಂಟರಿಂಗ್, ಕೌನ್ಸಲಿಂಗ್ ವ್ಯವಸ್ಥೆಯಲ್ಲಿ ಕೋರ್ಸ್‌ ನಡೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 15. ಜುಲೈ ತಿಂಗಳಿನಲ್ಲಿ ಪ್ರವೇಶ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ ತಿಂಗಳಿಂದ ತರಗತಿಗಳು ಆರಂಭವಾಗುತ್ತವೆ. ಆಸಕ್ತರು https://bit.ly/3Jrg0Hz ಈ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ 9945065060 / 7899769899 ಅಥವಾ massmedia@samvadabaduku.org ಮೂಲಕ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News