130 ಅಣ್ವಸ್ತ್ರಗಳು ಪ್ರದರ್ಶನಕ್ಕಲ್ಲ: ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕ್ ಸಚಿವ
Photo | Facebook
ಕರಾಚಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ಪಾಕಿಸ್ತಾನದ ರೈಲ್ವೇ ಸಚಿವ ಹನೀಫ್ ಅಬ್ಬಾಸಿ ಭಾರತವನ್ನು ಪ್ರಚೋದಿಸಿದ್ದು ಸಿಂದು ನದಿ ನೀರಿಗೆ ತಡೆಯೊಡ್ಡಿದರೆ ಯುದ್ಧಕ್ಕೆ ಸಿದ್ಧವಾಗುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
`ಅವರು(ಭಾರತ) ನೀರನ್ನು ತಡೆದರೆ ಅವರು ಯುದ್ಧಕ್ಕೆ ಸಿದ್ಧವಾಗಬೇಕು. ಘೋರಿ, ಶಹೀನ್ ಮತ್ತು ಘಝ್ನಾವಿಗಳು(ಬ್ಯಾಲಿಸ್ಟಿಕ್ ಕ್ಷಿಪಣಿಗಳು) ಪ್ರದರ್ಶನಕ್ಕಲ್ಲ. ನಾವು ಅವುಗಳನ್ನು ಭಾರತಕ್ಕಾಗಿ ಇರಿಸಿಕೊಂಡಿದ್ದೇವೆ. 130 ಅಣ್ವಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದಲ್ಲ. ನಾವು ದೇಶದಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂಬುದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಿಮ್ಮನ್ನೇ ಗುರಿಯಾಗಿಸಿಕೊಂಡಿವೆ' ಎಂದು ಅಬ್ಬಾಸಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇದಕ್ಕೂ ಮುನ್ನ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಅಧ್ಯಕ್ಷ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ `ಸಿಂಧು ನಮ್ಮದು ಮತ್ತು ನಮ್ಮದಾಗಿಯೇ ಇರುತ್ತದೆ. ಅದರ ಮೂಲಕ ನಮ್ಮ ನೀರು ಅಥವಾ ಅವರ(ಭಾರತದ) ರಕ್ತ ಹರಿಯುತ್ತದೆ' ಎಂದು ಸಿಂಧ್ ಪ್ರಾಂತದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು.
حنیف عباسی کا انڈیا کو منہ توڑ جواب! 8لاکھ فوجیوں کی موجودگی میں پہلگام واقعہ کیسے ہوا؟ حنیف عباسی کی اہم ترین نیوز کانفرنس#DunyaNews #DunyaVideos #HanifAbbasi pic.twitter.com/vjYCvaKvv2
— Dunya News (@DunyaNews) April 26, 2025