ಇಟಲಿ ಬಳಿ ನೌಕೆ ಮುಳುಗಿ 41 ವಲಸಿಗರು ಮೃತ್ಯು

Update: 2023-08-09 17:30 GMT

ಸಾಂದರ್ಭಿಕ ಚಿತ್ರ

ರೋಮ್: ಇಟಲಿಯ ಲ್ಯಾಂಪೆಡುಸ ದ್ವೀಪದ ಬಳಿ ಮಧ್ಯ ಮೆಡಿಟರೇನಿಯನ್ ಸಮುದ್ರದಲ್ಲಿ ಕಳೆದ ವಾರ ಹಡಗು ಮುಳುಗಿ ಕನಿಷ್ಟ 41 ವಲಸಿಗರು ಮೃತಪಟ್ಟಿರುವುದಾಗಿ ಇಟಲಿಯ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

ಹಡಗಿನಲ್ಲಿ ಮೂರು ಮಕ್ಕಳ ಸಹಿತ 45 ವಲಸಿಗರು ಪ್ರಯಾಣಿಸುತ್ತಿದ್ದು ಓರ್ವ ಮಹಿಳೆ ಸಹಿತ 4 ಮಂದಿ ಸಮುದ್ರದ ಅಲೆಗಳ ಎದುರು ಹೋರಾಡುತ್ತಿದ್ದಾಗ ಸರಕು ಸಾಗಿಸುವ ಹಡಗಿನವರು ರಕ್ಷಿಸಿ ಇಟಲಿಯ ಕರಾವಳಿ ರಕ್ಷಣಾ ಪಡೆಗೆ ಹಸ್ತಾಂತರಿಸಿದ್ದಾರೆ ಎಂದು ಇಟಲಿಯ `ಅಸ್ನಾ' ಸುದ್ಧಿಸಂಸ್ಥೆ ವರದಿ ಮಾಡಿದೆ. ಗುರುವಾರ ಟ್ಯುನೀಷಿಯಾದ ಸಫಾಕ್ಸ್ ನಗರದಿಂದ ಪ್ರಯಾಣ ಆರಂಭಿಸಿದ್ದ ಹಡಗು ಇಟಲಿಯ ದ್ವೀಪದ ಬಳಿ ಮುಳುಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವರ್ಷದ ಆರಂಭದ 6 ತಿಂಗಳಲ್ಲಿ ಸುಮಾರು 93,700 ವಲಸಿಗರು ಇಟಲಿಗೆ ಆಗಮಿಸಿದ್ದಾರೆ ಎಂದು ದೇಶದ ಆಂತರಿಕ ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News