ಲಾಸ್ ವೆಗಾಸ್ | 43 ಅಡಿ ಎತ್ತರದ ಟ್ರಂಪ್ ಬೆತ್ತಲೆ ಪ್ರತಿಮೆ ಸ್ಥಾಪನೆ

Update: 2024-09-29 16:00 GMT

ನ್ಯೂಯಾರ್ಕ್ : ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಕ್ರಾಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಬಣದ ಪ್ರಚಾರ ಕಾರ್ಯ ಪರಸ್ಪರ ಕೆಸರೆರಚಾಟಕ್ಕೆ ತಿರುಗಿದ್ದು ಕಮಲಾ ಹ್ಯಾರಿಸ್ ಚುನಾವಣಾ ರ್ಯಾಲಿ ನಡೆಯುವ ಪ್ರದೇಶದಲ್ಲಿ ಟ್ರಂಪ್ ಅವರ 43 ಅಡಿ ಎತ್ತರದ ಬೆತ್ತಲೆ ಪ್ರತಿಮೆ ಸ್ಥಾಪಿಸಿರುವ ಘಟನೆ ವರದಿಯಾಗಿದೆ.

ಉತಾಹ್ ನಗರವನ್ನು ಸಂಪರ್ಕಿಸುವ ಅಂತರ್‍ರಾಜ್ಯ ಹೆದ್ದಾರಿ 15ರ ಬದಿಯಲ್ಲಿ ಈ ಬೆತ್ತಲೆ ಪ್ರತಿಮೆ ಸ್ಥಾಪಿಸಲಾಗಿದ್ದು ಪ್ರತಿಮೆಯ ಪೀಠದಲ್ಲಿ ` ಮೊಂಡ ಮತ್ತು ಅಶ್ಲೀಲ' ಎಂದು ಬರೆಯಲಾಗಿದೆ. ಸ್ಪಂಜ್‍ನಿಂದ ನಿರ್ಮಿಸಲಾಗಿರುವ ಪ್ರತಿಎ 6,000 ಎಲ್‍ಬಿಎಸ್ (ಸುಮಾರು 2 ಸಾವಿರ ಕಿ.ಗ್ರಾಂ) ತೂಕವಿದೆ. 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯ ರೇಸ್‍ನಲ್ಲಿದ್ದ ಟ್ರಂಪ್ ಅವರ ಬೆತ್ತಲೆ ಪ್ರತಿಮೆ ಸ್ಥಾಪಸಲಾಗಿತ್ತು. ಆದರೆ ಅದು ಚಿಕ್ಕ ಗಾತ್ರವನ್ನು ಹೊಂದಿತ್ತು. ಶುಕ್ರವಾರ ಸ್ಥಾಪಿಸಲಾಗಿರುವ ಈ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News