ಪಪುವಾ ನ್ಯೂಗಿನಿಯಾದಲ್ಲಿ 6.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Update: 2025-04-05 08:00 IST
ಪಪುವಾ ನ್ಯೂಗಿನಿಯಾದಲ್ಲಿ 6.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

PC: x.com/ForgivenMessenger

  • whatsapp icon

ಪಪುವಾ ನ್ಯೂಗಿನಿಯಾ ದೇಶದ ನ್ಯೂ ಬ್ರಿಟೈನ್ ದ್ವೀಪದ ಕರಾವಳಿಯಲ್ಲಿ ಶನಿವಾರ ಮುಂಜಾನೆ 6.9 ತೀವ್ರತೆಯ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 6.04 ಗಂಟೆ ವೇಳೆಗೆ 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೊಲಾಜಿಕಲ್ ಸರ್ವೇ ಹೇಳಿದೆ. ರಾಜಧಾನಿ ಕಿಂಬೆಯ ಆಗ್ನೇಯಕ್ಕೆ 194 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದೆ.

ಭೂಕಂಪದ ಹಿನ್ನೆಲೆಯಲ್ಲಿ 1 ಮೀಟರ್ ಎತ್ತರದಿಂದ ಮೂರು ಮೀಟರ್ ಎತ್ತರದವರೆಗಿನ ದೈತ್ಯ ಅಲೆಗಳು ಸೋಲೊಮನ್ ದ್ವೀಪದ ಭಾಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಯುಎಸ್ ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ.

ಪ್ರಬಲ ಭೂಕಂಪ ಸಂಭವಿಸಿದ 30 ನಿಮಿಷಗಳ ಬಳಿಕ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ಹೊಂದಿದ್ದ ಮತ್ತೊಂದು ಭೂಕಂಪ ಅದೇ ಪ್ರದೇಶದಲ್ಲಿ ಸಂಭವಿಸಿದೆ. ಪಪೂವಾ ನ್ಯೂಗಿನಿಯಾ ಫೆಸಿಫಿಕ್ ರಿಂಗ್ ಆಫ್ ಫೈರ್ ಪ್ರದೇಶದಲ್ಲಿದ್ದು, ಪದೇ ಪದೇ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ. ಜತೆಗೆ ಗುಡ್ಡಗಾಡು ಪ್ರದೇಶಗಳಲ್ಲಿ ನಿಯತವಾಗಿ ಭೂಕುಸಿತಗಳು ಮತ್ತು ಪ್ರಮುಖ ಹಾನಿಗಳು ಸಂಭವಿಸುವುದು ಸಾಮಾನ್ಯ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News