ಕೆನಡಾದಲ್ಲಿ ಭೀಕರ ಕಾಡ್ಗಿಚ್ಚು | ಸಾವಿರಾರು ಜನರ ಸ್ಥಳಾಂತರ

Update: 2024-05-12 16:09 GMT

ಸಾಂದರ್ಭಿಕ ಚಿತ್ರ

ಒಟ್ಟಾವೊ : ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಈಶಾನ್ಯ ಭಾಗದಲ್ಲಿ ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಸಮರೋಪಾದಿ ಕಾರ್ಯಾಚರಣೆ ಆರಂಭಗೊಂಡಿದ್ದು ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಕಾಣಿಸಿಕೊಂಡಿದ್ದ ಬೆಂಕಿ ಕ್ಷಿಪ್ರಗತಿಯಲ್ಲಿ ಹರಡಿದ್ದು ಶನಿವಾರ ಸುಮಾರು 17 ಚದರ ಕಿ.ಮೀ ಪ್ರದೇಶಕ್ಕೆ ವ್ಯಾಪಿಸಿದ್ದು ಫೋರ್ಟ್ ನೆಲ್ಸನ್ ನಗರದ ಸನಿಹದಲ್ಲಿತ್ತು ಎಂದು ಬ್ರಿಟಿಷ್ ಕೊಲಂಬಿಯಾ ಕಾಡ್ಗಿಚ್ಚು ನಿಯಂತ್ರಣಾ ಕೇಂದ್ರದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಫೋರ್ಟ್ ನೆಲ್ಸನ್ ನಗರದ ಸುಮಾರು 3,500 ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು ಸ್ಥಳಾಂತರಗೊಂಡಿರುವುದನ್ನು ದೃಢಪಡಿಸಿಕೊಳ್ಳಲು ಅಧಿಕಾರಿಗಳು ಪ್ರತೀ ಮನೆಗೆ ಭೇಟಿ ನೀಡಿದ್ದಾರೆ. ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿಯಿಂದಾಗಿ ಕಾಡ್ಗಿಚ್ಚು ಕ್ಷಿಪ್ರಗತಿಯಲ್ಲಿ ಹರಡಿದ್ದು ಹೊಗೆಯ ಕಾರ್ಮೋಡ ಸಮೀಪದ ಅಲ್‍ಬರ್ಟ ಮತ್ತು ಎಡ್ಮಂಟನ್ ನಗರಕ್ಕೂ ವ್ಯಾಪಿಸಿದೆ. ಗಾಳಿಯ ಗುಣಮಟ್ಟ ಕುಸಿಯುತ್ತಿರುವುದರಿಂದ ಜನತೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News