ಅಫ್ಘಾನ್: ಆತ್ಮಹತ್ಯಾಬಾಂಬ್ ದಾಳಿಗೆ ಐವರು ಬಲಿ

Update: 2025-02-11 23:22 IST
ಅಫ್ಘಾನ್: ಆತ್ಮಹತ್ಯಾಬಾಂಬ್ ದಾಳಿಗೆ ಐವರು ಬಲಿ

ಸಾಂದರ್ಭಿಕ ಚಿತ್ರ

  • whatsapp icon

ಕಾಬೂಲ್: ಈಶಾನ್ಯ ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾಬಾಂಬ್ ಒಬ್ಬಾತ ಮಂಗಳವಾರ ಬ್ಯಾಂಕೊಂದರ ಮುಂದೆ ತನ್ನನ್ನು ಸ್ಫೋಟಿಸಿಕೊಂಡಿದ್ದಿರಂದ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ

ಕುಂಡುಝ್ ಪ್ರಾಂತ್ಯದಲ್ಲಿರುವ ಕಾಬೂಲ್ ಬ್ಯಾಂಕ್ ಶಾಖೆಯ ಸಮೀಪ ಬೆಳಗ್ಗೆ 8:35ರ ವೇಳೆಗೆ ಈ ಆತ್ಮಹತ್ಯಾ ದಾಳಿ ನಡೆದಿದೆ. ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಓರ್ವ ಬ್ಯಾಂಕ್‌ನ ಕಾವಲುಗಾರ, ಇತರ ನಾಲ್ವರು ನಾಗರಿಕರು ಮತ್ತು ಅಫ್ಘಾನ್ ಭದ್ರತಾ ಪಡೆಯ ಸಿಬ್ಬಂದಿಯೆಂದು ಮೂಲಗಳು ತಿಳಿಸಿವೆ.

ಈ ಘಟನೆಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆಯೆಂದು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆಂದು ಕುಂಡುಝ್ ಪ್ರಾಂತ ಪೊಲೀಸ್ ಕಾರ್ಯಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News